Posts

Showing posts from March, 2018

ದನಿಯಿರದ ಬಾಳಿನಲ್ಲಿ -(೨)-

Image
                                                              -೨- ''ನನ್ನೊಳಗಿನ ನಾಳೆಗಳು ಬಂದಾವೆ? ನಾಲೆಗಳ ಸೆರಗಿನಲ್ಲಿ ಕೊಸರಿಕೊಂಡು ಹೋದರೆ? ಅದರ ಹಿಂದೆ ಓಡಿ ಹೋಗಿ ತಡೆಯುವ ಪ್ರಯತ್ನ ಮಾಡಲೇನು?  ನನ್ನಲ್ಲಿ ಇಲ್ಲ ಅಷ್ಟೊಂದು ಚೈತನ್ಯ ಶಕ್ತಿ, ಪ್ರಾಣಶಕ್ತಿ. ಅತ್ತು ಗೋಳಾಡಿ ಕನಿಕರದಿಂದ ಪಡೆಯಲೇ? ಅಥವಾ ಹಠ ಸಾಧಿಸಿ ಹೋರಾಡಿ ಗೆದ್ದು ಛಲದಿಂದ ದಕ್ಕಿಸಿಕೊಳ್ಳಲೇ? ಯಾವುದಕ್ಕೂ ಉತ್ಸಾಹವಿಲ್ಲ. ಅಕಸ್ಮಾತ್ ಪಡೆದರೂ ಆ ಖುಷಿಯನ್ನು ಸಂಭ್ರಮಿಸಲಾರೆ. ''ಓ...., ಸಿಕ್ಕಿ ಬಿಟ್ಟಿತೇ'' ಅಂತಂದು ತೆಪ್ಪಗಿದ್ದು ಬಿಟ್ಟರೆ? ನನ್ನ ಅಧಿಕಾರಕ್ಕೊಳಪಟ್ಟದ್ದಕ್ಕಾಗಿ ಖಂಡಿತಾ ದುಃಖಿಸಿಕೊಳ್ಳುವುದು. ಒಂದು ಕೃತಜ್ಞತೆಯೂ ಇಲ್ಲವಾಯಿತೇ ಎಂದು? ಕಷ್ಟ ಪಟ್ಟು ಪಡೆದರೆ ದಕ್ಕಿದ್ದಕ್ಕೆ ಖುಷಿಯಾಗಬಹುದು. ಆದರೆ ಈ ಜಡತ್ವದಿಂದ ಹೇಗೆ ಹೊರ ಬರಲಿ? ಛೆ!!! ''  ಸೂರ್ಯನೂ ತನ್ನ ಸಿಸ್ಟಮ್ ಆಫ್ ಮಾಡಿ ಸಕಲ ಜೀವರಾಶಿಗಳಿಗೂ ಬೈ ಹೇಳಿ ಡ್ಯೂಟಿ ಮುಗಿಸಿಕೊಂಡು ಹೊರಟ. ''ಎಷ್ಟು ಚೈತನ್ಯ ಪೂರ್ಣನಾತ, ಬೆಳಗ್ಗೆ ಫ್ರೆಶ್ ಆಗಿ ಬರ್ತಾನೆ, ಹೊತ್ತು ಹೋದಂತೆ ಉರಿಯುತ್ತಾನೆ, ಪಾಪ ಅವನಿಗೂ ಕೆಲಸದ ಒತ್ತಡ. ಮತ್ತೆ ಮಧ್ಯಾಹ್ನ ತುಂಬಾ ಬಿಸಿಯಾಗಿರುತ್ತಾನೆ. ಸಂಜೆಯ ಹೊತ್ತಿಗೆ ಬಳಲಿ ಬೆಂಡಾಗಿ  ಹೋಗಿರುತ್ತಾನೆ. ಈ ಮುಸ್ಸಂಜೆಯ ಬೆಳಕೇ ಹೇಳುತ್ತದೆ ಅವನ ಬಳಲಿಕೆ ಎಷ್ಟೆಂದು. ಆದರೂ ಮರುದಿನ ಮತ್ತದೇ ಉತ್ಸಾಹದಿಂದ ಬರುತ್