Posts

Showing posts from June, 2018

ಉಪ್ಪು- ರುಚಿಗೆ ತಕ್ಕಷ್ಟು....

Image
  ಚಿ ಕ್ಕವಳಿರ್ಬೇಕಾದ್ರೆ ರಾತ್ರಿ ಮಲಗುವ ಹೊತ್ತಿಗೆ ದಿನಾ ಅಮ್ಮನನ್ನು ಪಿಡಿಸುತ್ತಿದೆ. ಅಮ್ಮಾ ಒಂದು ಕಥೆ ಹೇಳು ಅಂತ. ಅವಳಿಗೆ ಒಂದಷ್ಟು ಕಥೆಗಳು ಗೊತ್ತಿತ್ತು. ಅದರಲ್ಲಿ ರಾತ್ರಿ ಮಲಗುವ ಹೊತ್ತಿಗೆ ಹೇಳ್ತಿದ್ದದ್ದು ಕಾಗಕ್ಕ ಗುಬ್ಬಕ್ಕನ್ ಕಥೆ, ಪುಣ್ಯ ಕೋಟಿ ಕಥೆ, ಸುಟ್ಟವು ಮಾಣಿ ಕಥೆ ಹೀಗೆ ಒಂದಷ್ಟು. ಇವುಗಳನ್ನೇ ರೋಟೇಷನ್ ನಲ್ಲಿ ಪ್ರತಿ ದಿನ ಹೇಳ್ತಿದ್ಳು. ಹೇಳಿದ್ದನ್ನೇ ಹೇಳ್ಲಿಕೆ ಅವ್ಳಿಗೆ ಬೇಜಾರ್ ಆಗ್ತಿರ್ಲಿಲ್ಲ, ಪ್ರತಿ ಸಲ ಹೇಳುವಾಗಲೂ ಅಷ್ಟೇ ಸ್ವಾರಸ್ಯ ಕರವಾಗಿ, ರೋಮಾಂಚಕವಾಗಿ ಹೇಳ್ತಾ ಇದ್ಳು. ನಾನೂ ಅಷ್ಟೇ ಕುತೂಹಲದಿಂದ ಕೇಳ್ತಾ ಇದ್ದೆ.  ಇದ್ರಲ್ಲಿ ಕೆಲವು ಕಥೆಗಳನ್ನು ನೀವೂ ಕೇಳಿರಬಹುದು. ಅಮ್ಮಾ ಹೇಳುತ್ತಿದ್ದ ಕಥೆಗಳಲ್ಲಿ ಒಬ್ಬ ಸಾಹುಕಾರ ಹಾಗೂ ಅವನ ಮೂರು ಜನ ಮಗಳಂದಿರ ಕಥೆಯೂ ಒಂದು. ಇದರ ಶೀರ್ಷಿಕೆ ಏನು ಅಂತ ಗೊತ್ತಿಲ್ಲ, ಕಥೆ ಮಾತ್ರ ಇನ್ನೂ ಹಾಗೇ ನೆನಪಿದೆ.   ಒಂದೂರಲ್ಲಿ ಒಬ್ಬ ಸಾಹುಕಾರ ಇದ್ದನಂತೆ. ಆತನಿಗೆ ಮೂರು ಜನ ಹೆಣ್ಣು ಮಕ್ಕಳು. ಮೂರು ಜನರ ಮೇಲೂ ಆತನಿಗೆ ತುಂಬಾ ಪ್ರೀತಿ. ಆದರೆ ಮಕ್ಕಳಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇರಬಹುದು ಎಂಬ ಕುತೂಹಲ . ಅದಕ್ಕಾಗಿ ಒಂದು ದಿನ ತನ್ನ ಮೂರೂ ಜನ ಹೆಣ್ಣು ಮಕ್ಕಳನ್ನು ಬಳಿ ಕರೆದು ''ಮಕ್ಕಳೇ ನಿಮಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ? ಹೇಳುವಿರಾ?" ಎಂದು ಕೇಳುತ್ತಾನೆ. ಥಟ್ಟನೆ ಹಿರಿ ಮಗಳು "ಅಪ್ಪಾ ನನಗೆ ನಿಮ್ಮ ಮೇಲೆ ಸಕ್ಕರೆಯಷ್ಟು ಪ್ರೀತ

ಹ್ಮ್!!!

Image
''ಆತ ಕಿತ್ತುಕೊಂಡದ್ದು ನನ್ನ ಊರುಗೋಲನ್ನ. ಬದುಕು ವ್ಯರ್ಥವಾಗುವ ಮೊದಲೇ ಅರ್ಥವಾಗಿದೆ. ಅರ್ಥವಾಗುತ್ತಲೇ ಇದೆ. ಎದ್ದು, ಬಿದ್ದು ನಡೆಯಲು ಕಲಿತೆ, ಶೀಘ್ರದಲ್ಲೇ ನೆಟ್ಟಗೆ ನಿಲ್ಲುವೆನೆಂಬ ಭರವಸೆ. ಭರವಸೆ,ಆಸೆ, ಬಯಕೆಗಳೆಲ್ಲಾ ದಿಟವಾಗುವುದೆಂಬ ಉತ್ಸಾಹ ನನ್ನಲ್ಲಿಲ್ಲ. ನಾ ಕಣ್ಬಿಟ್ಟು ಪ್ರಪಂಚ ನೋಡುವ ಹೊತ್ತಿಗೆ ಸೂರ್ಯನೇಕೋ ಮುನಿಸಿಕೊಂಡ, ಕತ್ತಲಾಯಿತು. ಆ ಕಿರು ಬೆರಳ ನೆನಪೇ ನನಗಿಲ್ಲ. ಕೂಸು ಮರಿ ಆಡಲಿಲ್ಲ, ಆ ಭುಜಗಳಲ್ಲಿ ಕುಳಿತುಕೊಳ್ಳುವಷ್ಟು ಸಮಯವೇ ಇರಲಿಲ್ಲ. ಆತ ದೂರ ಸರಿದ, ನಾ ದೊಪ್ಪೆಂದು ಬಿದ್ದು ಬಿಟ್ಟೆ, ೧೮ ವರುಷಗಳಿಂದಲೂ ಮೇಲೇಳಲು ಪ್ರಯತ್ನಿಸುತ್ತಲೇ ಇರುವೆ. ಯೂವತ್ತೋ ಒಂದು ದಿನ ಮೇ ಲೆದ್ದು ನಿಂತುಕೊಳ್ಳುವೆ, ಆದರೆ ದೂರ ಸರಿದಾತ ಹಿಂತಿರುಗುವನೇ? ಪ್ರತೀ ಸಂದರ್ಭದಲ್ಲೂ ಆ ಸ್ಥಾನ ಕಾಲಿ. ಮುಂದೆಂದೂ ಆ ಪದ ಬಳಕೆಗೆ ಆಸ್ಪದವಿಲ್ಲ. ಎರಡಕ್ಷರದ ಆ ಪದವನ್ನು ತೊದಲುವ ಮುನ್ನವೇ ಆ ಪಾತ್ರಕ್ಕೆ ನನ್ನ ಬಾಳಲ್ಲಿ ತೆರೆ ಎಳೆಯಲಾಯಿತು. ನಾನುಂಡ ಪ್ರತಿ ಅಗುಳು ಅನ್ನವೂ ನನಗೆ ಸೇರಬೇಕಾಗಿದ್ದದ್ದೇ?ಎಂಬ ಸಂಷಯ. ಕೋಗಿಲೆ ಮರಿಗಾದರೂ ಕಾಗೆ ಗೂಡಿಂದ ಹಾರಿ ಹೋಗಲು ಅವಕಾಶವಿದೆ. ಹಲವು ಬಾರಿ ಅತ್ತಿದ್ದೇನೆ, ಕೊರಗಿದ್ದೇನೆ, ಕಲ್ಪಿಸಿಕೊಂಡಿದ್ದೇನೆ ಆದರೆ ಆ ಊರುಗೋಲು ನನಗೆ ಸಿಗಲೇ ಇಲ್ಲ. ಈ ಬದುಕು ನಾ ಬಯಸಿ ಬಂದದ್ದಲ್ಲ. ಆದರೆ ಇಲ್ಲೇ ನಾ ನೆಮ್ಮದಿಯ ಹುಡುಕ ಹೊರಟೆ, ಹೊಂದಿಕೊಂಡೆ. ಮುಂದಿನ ಬದುಕು ನನ್ನ ಆಯ್ಕೆಗೆ ಬಿಟ್ಟದ್ದು. ನನ್ನ

ಭಾವನೆಗಳಿಗೂ ರೂಪ ಕೊಡಿ...

Image
ನಮ್ಮಲ್ಲಿ ಹಲವು ಭಾವನೆಗಳು ಭುಗಿಲೇಳಬಹುದು. ದ್ವೇಷ, ಅಸೂಯೆ, ನೋವು, ಹತಾಶೆ, ಮದ, ಮತ್ಸರ,ಸಂತೋಷ, ಪ್ರೀತಿ ಹೀಗೆ ಒಳ್ಳೆಯದ್ದು-ಕೆಟ್ಟದ್ದು ಮಣ್ಣೋ- ಮಸಿಯೋ ಮತ್ತಿನ್ನೆಲ್ಲವೂ. ಇದು ನಮ್ಮ ತಪ್ಪಲ್ಲ. ಹಾಗೆಂದು ಕೇವಲ ನಮ್ಮ ಸುತ್ತಲಿನವರದ್ದು, ಸಮಾಜದ್ದು ಮಾತ್ರವೇ ಅಲ್ಲ. ಆ ಭಾವನೆಗಳ ಹಿಂದೆ ದ್ವೇಷ ಸಾಗಿಸುತ್ತಾ, ಕಣ್ಣೀರಿಡುತ್ತಾ ಗೋಗರೆಯುತ್ತಾ,ನಗುತ್ತಾ ಕೇಕೆ ಹಾಕುತ್ತಾ ಹೋದರೆ ನಮಗೆ ಸಿಗುವುದಾದರೂ ಏನು? ಮತ್ತೆ ಅದೇ ಭಾವನೆಗಳು. ಅವುಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ಕಥೆಯಾಗಿಸಿ, ಕವನವಾಗಿಸಿ, ಅಕ್ಷರಗಳಲ್ಲಿ ಪೋಣಿಸಿ. ಸಿಗುವುದೇನು ಗೊತ್ತೇ ಒಂದು ಹಿಡಿ ನೆಮ್ಮದಿ. ಭಾವನೆಗಳನ್ನು ಹತ್ತಿಕ್ಕುವಿರಾದರೆ ಪೆನ್ ಪೇಪರ್ಗಳ ಮೂಲಕ ಹತ್ತಿಕ್ಕಿ.  :-) # ಪ್ರಗಲ್ಭಾ #

ಹೆಣ್ಣು ಬದುಕಿನ ಸ್ವಗತ

Image
ಹೆಣ್ಣಿನ ಕಡೆಯವರು ಬರುತ್ತಾರೆಂದು  ಹಳೆ ಗುಜುರಿ ಮನೆಗೆ ಬಣ್ಣ ಕೊಟ್ಟರು. ಮದುವೆ ನಡೆಯಿತು, ಮದುಗಳು ಮನೆಗೆ ಬಂದಳು. ಬರು ಬರುತ್ತಾ ಬಣ್ಣ ಉದುರಲು ಪ್ರಾರಂಭವಾಯಿತು. ಚಂದಮಾಸಿತು, ಮಣ್ಣಿನ ಗೋಡೆಯದು ಹಳತು  ಎಂಬುದಾಕೆಗೆ ಖಾತ್ರಿಯಾಯಿತು. ಕಾಲ ಕಳೆಯಿತು, ಮಳೆಗಾಲವದು ಮನೆಯ ಮಾಡು ಸೋರುವುದೂ ಆಕೆಗೆ ತಿಳಿಯಿತು. ಇಡುತ್ತಾರಲ್ಲಲ್ಲಿ ಪಡಿಗೆ, ಪಾಟೆ, ಪಾತ್ರಗಳನ್ನು. ಅದು ಸೆಕೆಗಾಲ, ಗೆದ್ದಲುಗಳು ನಾನಾ ತರದ ಇರುವೆಗಳು, ಸೆಕೆ ಹಾತೆಗಳು ಇತ್ಯಾದಿಗಳು ಮನೆಯ ಸಂಧಿ-ಗೊಂದಿಗಳ  ಮಾಟೆಯಿಂದ ಏಳಲಾರಂಭಿಸಿದವು. ಅರ್ಥವಾಯಿತಾಕೆಗಾಗ ಇದು ಜೀವ ವೈವಿಧ್ಯಗಳ  ತಾಣವೆಂದು (bio diversity hot spot) ಒಂದು ಮುಸ್ಸಂಜೆ ಚಿಂತಿಸುತ್ತಾ ನಿಂತಿದ್ದಳು ಗಿಳಿಬಾಗಿಲಿಗೊರಗಿ ನೀರವ ಮೌನ, ಸುತ್ತಲೂ ಕತ್ತಲು ಜಾರಿ ಬರುವ ಹೊತ್ತು. "ದೇವ! ಕೆಟ್ಟೆನೇ ಊರವರ ಮಾತು ನಂಬಿ?" ಆಗಲೇ ಪರಮಾತ್ಮ ಪ್ರತ್ಯಕ್ಷನಾದನೇನೋ! ನೀಡಿಹನು ಭಸ್ಮವ ತನ್ನ ಮೊರೆಯ ಕೇಳಿ, ಅಲ್ಲ ಅದು ಕುಟ್ಟೆ ಸುರಿದದ್ದು.  ಬಾಗಿಲೂ ಕುಂಬು. ಬಣ್ಣ ಮರೆಮಾಡಿತು,  ಕೊಟ್ಟಗೆಯಂತಿಹ ಮನೆಯ ಅರಮನೆಯೆಂದು  ತಿಳಿದು ಮೋಸಹೋದೆವು, ನಾನು ನನ್ನ ತವರಿನವರು. ಗೋಸುಂಬೆ ಅಂದು ಸಿಟ್ಟುಗೊಂಡಿತ್ತು ತನ್ನನ್ನು ಸೋಲಿಸಿದ ಜನರ ಕಂಡು. ತಲೆಬಗ್ಗಿಸಿ ಹಾರ ಹಾಕಿಸಿಕೊಂಡಾತ, ಕಾಲುಂಗುರ ಹಾಕಿದವಳು,  ಮುಂಡಾಸು ತೊಟ್ಟು ದಕ್ಷಿಣೆ ನೀಡುತ್ತಿದ್ದಾತ, ಪನ್ನೀರು ಸಿಂ

ಕಾಲಯಾಪನೆಯ ಕೂಗು ನಿರಂತರ....

Image
ಅಂದು ಒಂದು ಮುಸ್ಸಂಜೆ ಸೂರ್ಯ ಮುಳುಗುವ ಹೊತ್ತು ಉದಯಿಸಲಿತ್ತು ನನ್ನ ಬಾಳಿನ ಸಂಪತ್ತು ಅದೇ ಚಿಂತೆಯಾಗಿ ಕಾಡುತಿತ್ತು ಎಲ್ಲಾ ಅಮ್ಮಂದಿರಂತೆ ನಾ ಸಂಭ್ರಮಿಸಲಾರೆ ಕಂದನ ಆಗಮನದ ನಿರೀಕ್ಷೆ ಯಲ್ಲಿ ಲೀನಳಾಗಲಾರೆ ಏಕೆಂದರೆ ನನ್ನ ತಾಯ್ತನಕ್ಕೆ ಪರವಾನಗಿ ಇರಲಿಲ್ಲ ವೇದ ಅಪೌರುಷೇಯ, ಆದರೆ........... ಪುರೂರವನ ಪಿತಾನಾರು ಎಂದರೆ ಉತ್ತರ.......?? ಕಡಲೊಡಲಿಗೆ ಸೇರಿಸಲೇ? ಮಡಿಲಲ್ಲಿಟ್ಟು ಬರಲೇ? ಕ್ರೂರಿಯೇ ಚಂದ್ರಹಾಸನ ಕೊಲ್ಲದಿರಲು ತಾಯಿ ನಾನೆಂತು ಹಸುಳೆಯ ಕತ್ತು ಹಿಸುಕಲಿ? ಕ್ಷಣವೇ ನೆನಪಾದಳು ಕುಮಾರಿ ಕುಂತಿ ಅಂದು ಆಕೆಯ ಎದುರು ಪ್ರತ್ಯಕ್ಷನಾಗಿದ್ದ ಸೂರ್ಯದೇವ ಇಂದು ಅಸ್ತಂಗತ, ಒಂಟಿ ನಾ ಆ ಬಾಲೆಯೊಡನೆಂತು ಹಂಚಿಕೊಳ್ಳಲಿ ನನ್ನ ಮನದ ಇಂಗಿತ.. ಆ ನೋವಲ್ಲಿ ನೋಡಿದ್ದು ರಕ್ತವರ್ಣದ ಆ ಕಂದಮ್ಮನ ಮುದ್ದು ಮೊಗವನ್ನು ಒಡನೆಯೇ ನೋವು ಮಾಯ, ಆದರೇನು? ನನಗೆ ಋಣವಿಲ್ಲವಲ್ಲ, ಅದು ಕರ್ಣನೋ? ವೈದೇಹಿಯೋ? ಬೆಸ್ತನಿಗಾದರೂ ಸೇರಲಿ, ಅರಸನಿಗಾದರೂ ದಕ್ಕಲಿ ಸುಖವಾಗಿರಲಿ ಎಂದು ತೊರೆದು ಬರುವಾಗಾದದ್ದು  ಕೇವಲ ನೋವಲ್ಲ, ಯಾತನೆಯೋ, ವೇದನೆಯೋ ವಿವರ್ಣನೀಯ.. ಅಂಬಾ ಎಂದು ಓಡುತ್ತಾ ಕರುವೊಂದು ತನ್ನಮ್ಮನ ಕೆಚ್ಚಲಿನ ಹಾಲ ಕುಡಿಯುತ್ತಲಿತ್ತು ತಬ್ಬಲಿ ಮಕ್ಕಳ ಕಣ್ಣಮುಂದೆ ಆ ಗೋವು ತನ್ನ ಕರುವನ್ನು ನೆಕ್ಕಿ ಮುದ್ದಿಸುತ್ತಲಿತ್ತು ತಮ್ಮ ವಿಳಾಸವೇ ಅರಿಯದ ಮಕ್ಕಳು ನಿರಾಶೆಯ ದೃಷ್ಟಿ

ನನ್ನ ಲೇಖನಿ ಬರೆಯುತ್ತಿಲ್ಲ.....

Image
ನನ್ನ ಲೇಖನಿ ಬರೆಯುತ್ತಿಲ್ಲ. ಷಾಯಿ ಗಟ್ಟಿಯಾಗಿದೆ, ಖಾಲಿಯಾಗಲಿಲ್ಲ.ನಿಬ್ ನ್ನು ಬೆಂಕಿಗೆ ಹಿಡಿಯಲು ಇಷ್ಟವಿಲ್ಲ. ಉರಿದ ಬೆಂಕಿಯನ್ನು ಆರಿಸುವುದು ಕಷ್ಟ. ಬೆಂಕಿ ಹಚ್ಚುವವರು ಸುಮ್ಮನಿದ್ದಾರೆ. ಬಹುಷಃ ಇಂಧನ ಕಾಲಿಯಾಗಿರಬೇಕು ಅಥವಾ ದಹ್ಯ ವಸ್ತುಗಳು ದೊರಕುತ್ತಿಲ್ಲ. ಗೊತ್ತಿಲ್ಲ, ಬೆಂಕಿ ನನಗೆ ಕಾಣಿಸದೇ ಇರಬಹುದು, ಶಾಖ ಸೋಕದೇ ಇರಬಹುದು. ನನ್ನ ಲೇಖನಿ ಬರೆಯುತ್ತಿಲ್ಲ. ಬಹುಷಃ ಹೃದಯಕ್ಕೆ ವಯಸ್ಸಾಗಿರಬೇಕು, ಬಂಜೆಯಂತೂ ಅಲ್ಲ. ಮೊನ್ನೆ ಮೊನ್ನೆಯ ತನಕ ಬಾಣಂತನದ ಸೊಬಗನ್ನು ಅನುಭವಿಸಿದೆ. ಮಿದುಳು ಬರಡಾಗಿದೆ, ಬುದ್ಧಿ ಕೊರಡಾಗಿದೆ. ಯೋಚನೆಗಳ ಬರಗಾಲವಿರಬಹುದೇನೋ. ಒಂದೂ ತಿಳಿಯುತ್ತಿಲ್ಲ. ನನ್ನ ಲೇಖ ನಿ ಬರೆಯುತ್ತಿಲ್ಲ. ಶೈಶವಾವಸ್ಥೆಯಲ್ಲಿದ್ದ ಕೆಲವು ಭಾವನೆಗಳೂ ಸಾಯುತ್ತಿವೆ. ಅದಾವ ರೋಗ? ಅಯ್ಯೋ! ಕಣ್ಣುಗಳು ಮಂಜಾಗುತ್ತಿವೆ, ಕನ್ನಡಕ ಕಾಣೆಯಾಗಿದೆ, ಹಸುರುಟ್ಟ ಪ್ರಕೃತಿಯ ಜಳಕದ ಸದ್ದೂ ಅಸ್ಪಷ್ಟ. ಕಿವಿಗಳೂ ಕಿವುಡಾಗಿವೆ. ಉರಿದ ಬೆಂಕಿಗೆ ಚರ್ಮ ಸುಟ್ಟು ಕರಕಲಾಗಿರಬೇಕು, ಸ್ಪರ್ಶವನ್ನೂ ಗ್ರಹಿಸುತ್ತಿಲ್ಲ. ನನ್ನ ಲೇಖನಿ ಬರೆಯುತ್ತಿಲ್ಲ. ಸುತ್ತಲಿದ್ದ ಕಿರಾತಕರೂ ಕಾಣೆಯಾಗಿದ್ದಾರೆ, ಕಿನ್ನರಿ ನುಡಿಸುವವರೂ ಕಣ್ಮರೆಯಾಗಿದ್ದಾರೆ. ಏಕಾಂಗಿತನದ ಹಮ್ಮಿಲ್ಲ, ಏಕಾಂತದ ಹಂಗಿಲ್ಲ. ಸಮಯವನ್ನು ಸಹಿಸಬೇಕಾಗಿಲ್ಲ, ಅದಕ್ಕಾಗಿ ಕಾಯಬೇಕಾಗಿಲ್ಲ. ಇನ್ನೆಷ್ಟು ಕಾರಣಬೇಕು? ಭಾವನೆಗಳು ಹುಟ್ಟದಿರಲು? ಹಸಿವಾಗದಿರಲು? ಕಾರಣ ಗಂಟೆಗೊಮ್ಮೆ ತಿನ್ನು

ಬಂದೇ ಬಿಟ್ಟಿತು ಜೂನ್....!!!

Image
ಪ್ರಕೃತಿಗೆ ವಸಂತ ಎಷ್ಟು ನವೀನವೋ ಅಷ್ಟೇ ನೂತನವಾದದ್ದು ವಿದ್ಯಾರ್ಥಿಗಳಿಗೆ ಜೂನ್ ತಿಂಗಳು. ಮೊದಲ ಮಳೆ ಭೂಮಿಗೆ ಬಿದ್ದಾಗ ಮಣ್ಣಿನ ಪರಿಮಳ ಬರ್ತದಲ್ಲಾ ಹಾಗೆ ಜೂನ್ ತಿಂಗಳಲ್ಲಿ ಪುಸ್ತಕದ ಪರಿಮಳ. ಈ ಮಣ್ಣು, ಪುಸ್ತಕ ಇವುಗಳು ಅರೋಮ್ಯಾಟಿಕ್ ಕಾಂಪೌಂಡ್ಸ ಅಲ್ಲ. ಆದರೂ ಪರಿಮಳ ಅನಿಸಿಬಿಡ್ತದೆ. ಕಾರಣ, ಅವುಗಳ ಹಿಂದೆ ಇರುವ ಸಾಲು ಸಾಲು ನೆನಪುಗಳು. ಮೊದಲ ಬಾರಿಗೆ ಒಂದನೇ ಕ್ಲಾಸಲ್ಲಿ ಹೊಸಪುಸ್ತಕದ ಪರಿಮಳ ತಿಳಿದದ್ದು. ಆದ ಕಾರಣ ಇಂದಿಗೂ ಪುಸ್ತಕದ ಸುವಾಸನೆ ಬಡಿದಾಗ ೧ನೇ ಕ್ಲಾಸ್ ನೆನಪಾಗ್ತದೆ. ಈ ಜೂನ್ ತಿಂಗಳು ಶಾಲಾ ಕಾಲೇಜುಗಳ ಪ್ರಾರಂಭದ ತಿಂಗಳು. ವಿದ್ಯಾರ್ಥಿಗಳು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ದಾಟುವ ಪ‌ರ್ವಕಾಲ. ಹಾಗೂ ಹೊಸತೊಂದು ಚೈತನ್ಯ ಶಕ್ತಿ ಅಲ್ಲಿ ಸಂಚಾರ ಅಗ್ಲಿಕ್ಕೆ ಪ್ರಾರಂಭ ಆಗ್ತದೆ. ಅಲ್ಲಿ ಎಲ್ಲವೂ ಹೊಸತು, ಬ್ಯಾಗ್, ಕೊಡೆ, ಚಪ್ಪಲು, ಕಂಪಾಸ್ ಬಾಕ್ಸ್, ಓದುವ ಬರೆಯುವ ಪುಸ್ತಕಗಳು, ತರಗತಿ ಕೋಣೆಗಳು, ಒಮ್ಮೊಮ್ಮೆ ಸಹಪಾಠಿಗಳು, ಇನ್ನೊಮ್ಮೊಮ್ಮೆ ಪಾಠ ಹೇಳುವ ಮಾಸ್ಟ್ರು, ಸಿಲೇಬಸ್, ಬೆಂಚು ಡೆಸ್ಕು‍ಗಳು. ಹೀಗೆ ಹೊಸತರದ್ದೇ ರಾಯಭಾರ. ಎರಡು ತಿಂಗಳು ಮಕ್ಕಳಿಲ್ಲದೆ ಅನಾಥವಾಗಿದ್ದ ಶಾಲೆ ಕಾಲೇಜುಗಳ ಜಗಲಿಗಳು, ಕೋಣೆಗಳು ಮತ್ತೆ ಹೊಸ ಬಾಳಂತನವನ್ನು ಅನುಭವಿಸಲು ಸಿದ್ದವಾಗ್ತದೆ, ಬಹುಷಃ ಅವುಗಳಲ್ಲೂ ಎನೋ ಒಂದು ಸಂಭ್ರಮ. ಅಲ್ಲಿನ ಕಿಟಕಿಯ ಸರಳುಗಳು, ಕಂಬಗಳು ಗೋಡೆಯ ಮೇಲಿನ ಚಿತ್ತಾರಗಳು ಮತ್ತೆ ತಯಾರಾಗ್ತವೆ, ಮಕ್ಕಳ ಆಟಕ್ಕೆ

ಬಾಳ ಪಯಣ ನಿರಂತರ....

Image
ಸಮಯ ಸಾಗುವ ಪರಿಯ ಹೇಳ್ಲಿಕ್ಕೆ ಕಷ್ಟ. ಕಾಲ ಎಷ್ಟು ಕಿಲೋ ಮೀಟರ್ ವೇಗದಲ್ಲಿ ಓಡ್ತದೆ ಅಂತ ಗೊತ್ತಾಗುದಿಲ್ಲ. ಮನಸ್ಸು ಅತ್ಯಂತ ವೇಗವಾಗಿ ಓಡುವಂತದ್ದು. ನನಿಗನ್ನಿಸ್ತದೆ ಅದರ ನಂತರದ ಸ್ಥಾನ ಕಾಲಕ್ಕೆ ಕೊಡ್ಬೋದೇನೋ ಅಂತ. ಮನಸ್ಸು ಸಂಚರಿಸುತ್ತದ, ಆದರೆ ದೇಹ ಇದ್ದಲ್ಲೇ ಇರುತ್ತದೆ. ಆದರೆ ಕಾಲ ಹಾಗಲ್ಲ ಚಲಿಸುತ್ತಾ ಚಲಿಸುತ್ತಾ ಎಲ್ಲವನ್ನು ಎಲ್ಲರನ್ನೂ ಕಿಞ್ಚಿತ್ತಾದರೂ ಬದಲಿಸಿಯೇ ತೀರುತ್ತದೆ. ಕಾಲ ಎಂಬ ಬಂಡಿಯಲ್ಲಿ ಕುಳಿತು ಪಯಣಿಸುವ (ಕೆಲವರು ಪವಣಿಸುವ) ಪಯಣಿಗರಂತೆ ನಾವು. ಎಲ್ಲಿಯೋ ಇದ್ದವರು ಎಲ್ಲಿಗೋ ತಲುಪಿ ಬಿಡುತ್ತೇವೆ. (ಭೌತಿಕವಾಗಿಯೂ, ಭೌದ‌್ಧಿಕವಾಗಿಯೂ) ಪಯಣಿಗ ಎಚ್ಚೆತ್ತುಕೊಂಡಿದ್ದರೆ ಸುತ್ತಲಿನ ವಾತಾವರಣವನ್ನು ಆಸ್ವಾದಿಸುತ್ತಾನೆ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ, ಒಳ್ಳೆದು ಕೆಟ್ಟದ್ದನ್ನು ತಿಳಿದುಕೊಳ್ಳುತ್ತಾನೆ, ಕೊನೆಗೆ ನಿಶ್ಚಿತ ಗುರಿಯನ್ನು ತಲುಪುತ್ತಾನೆ. ನಿದ್ರಿಸಿದ್ದರೂ ಇಳಿಯುವ ಸ್ಥಳ ತಲುಪುತ್ತಾನೆ. ಆದರೆ ಆತ ಪಡೆದುಕೊಂಡದ್ದು, ತಿಳಿದುಕೊಂಡದ್ದು, ಅನುಭವಿಸಿದ್ದು ಏನೂ ಇರುವುದಿಲ್ಲ. ಇನ್ನು ಕೆಲವರು ಅರ್ಧದಲ್ಲೇ ಇಳಿದುಕೊಳ್ಳುತ್ತಾರೆ.

ಹ್ಯಾಪಿ ಜರ್ನಿ

Image
ಕಾಲೊಂದನ್ನು ಮುರಿದ, ಊರುಗೋಲನ್ನು ಕಿತ್ತುಕೊಂಡ, ಪರ್ವತದಾಚೆ ದೀಪವೊಂದನ್ನು ಬೆಳಗಿಸಿ ನೋಡು ಎಂದ, ಹೋಗಬೇಕಾದ ದಾರಿಯಲ್ಲಿ ಮಳ್ಳು ಕಲ್ಲುಗಳನ್ನು ತುಂಬಿ ಸಾಗು ಎಂದ, ಒಂಟಿ ಕಾಲಿನ ಕುಂಟಿ ಕೂಸು ನಾ ಟೊಂಕ ಹಾಕಿ ಕೊಂಡು ಏರುತ್ತಿರುವೆ, ಆ ಕಡೆ ಈ ಕಡೆ ಪ್ರಪಾತ, ಮಧ್ಯದ ಕಾಲು ದಾರಿಯಲ್ಲಿ ಜಾರುತ್ತಿರುವೆ, ಮತ್ತೆ ಮತ್ತೆ ಏರುತ್ತಲೇ ಇರುವೆ.

ಹಜ್ಮೂಲ....

Image
ಸೋಮವಾರ ಬೆಳಗ್ಗಿನ ಮೂರನೇ ಪಿರಿಡ್,೧೦ ಬೆಂಚುಗಳಿದ್ದ ಕ್ಲಾಸ್ನಲ್ಲಿ, ನಾನು ನಾಲ್ಕನೇ ಬೆಂಚಿನ ಎಡತುದಿಯಲ್ಲಿದ್ದೆ. ಓರ್ಗಾನಿಕ್ ಕೆಮೆಸ್ಟ್ರಿ . ಲೆಕ್ಚರರ್ ಟಾರ್ಟಾರಿಕ್ ಆಸಿಡ್ ಟೋಟಲ್ ಸಿ ಂತೆಸಿಸ್ ಮಾಡ್ತಾ ಇದ್ರು. ನನಗೆ ಕೇಳ್ತಾ ಇದ್ದದ್ದು ಮಾತ್ರ ಕ್ಯಾಂಟಿನ್ ನಲ್ಲಿ ಆಗ್ತಾ ಇದ್ದ ಅನ್ನ, ಸಾಂಬಾರ್ ಸಿಂತೆಸಿಸ್. ಕ್ಲಾಸಲ್ಲಿದ್ದ ಒಂದಷ್ಟು ಜನಕ್ಕೆ ಬುತ್ತಿಯೊಳಗಿದ್ದ ದೋಸೆ,ಚಟ್ನಿ, ಇಡ್ಲಿ ಸಾಂಬಾರುಗಳ ಯೋಚನೆಯಾದರೆ, ಇನ್ನೊಂದಷ್ಟು ಜನಕ್ಕೆ ಕಿಟಕಿಯಿಂದ ಹೊರಗಡೆ ಇಣುಕಿ,ವರಾಂಡದಲ್ಲಿ ಅಡ್ಡಾಡುವ ಅಡ್ನಾಡಿಗಳನ್ನು ನೋಡುವುದೇ ಇಷ್ಟ. ಹಿಂದುಗಡೆ ಕುಳಿತಿದ್ದ ಮತ್ತೊಂದಷ್ಟು ಮಂದಿ ಬಾಯ್ ಫ್ರೆಂಡ್ ಕೊಟ್ಟ ಗಿಫ್ಟು,ನಿನ್ನೆಯಷ್ಟೇ ಕೊಂಡ ಆಂಡ್ರಾಯ್ಡು ಸೆಟ್ಟು,ಬಾಟನಿ ಮ್ಯಾಮ್ ಹಣೆಗಿಟ್ಟ ಬೊಟ್ಟು,ಫಸ್ಟ್ ಎರಡು ಪಿರಿಡ್ ಕ್ಲಾಸ್ ಬಂಕ್ ಮಾಡಿ ನೋಡಿದ್ದ ಮೂವಿಯಲ್ಲಿ ಅಕ್ಷಯ್ ಕುಮಾರ್ ಫೈಟು, ಇತ್ಯಾದಿ ಇತ್ಯಾದಿಗಳ ಬಗ್ಗೆ ಹರಟೆ ಒಂದಷ್ಟು. ಪಾಠ ಕೇಳ್ಲಿಕಂತಲೇ ಎದುರು ಬೆಂಚಲ್ಲಿ ಕೂತು, ಅತ್ಲಾಗಿ ಪಾಠವೂ ಕೇಳ್ಲಿಕ್ಕಾಗದೆ, ಇತ್ಲಾಗಿ ಮಾತಾಡ್ಲಿಕ್ಕೂ ಆಗದೆ ತ್ರಿಶಂಕು ಸ್ಥಿತಿಯಲ್ಲಿರುವ ಮಂದಿ ಇನ್ನೊಂದಷ್ಟು. ಇಲ್ಲಿರುವುದು ಮನುಷ್ಯರು ಅಂತ ಗೊತ್ತಿದ್ದೂ ಕ್ಲಾಸ್ ರೂಂ ನ ಪಕಾಸ್ ನ ಒಂದು ಮೂಲೆಯಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳನ್ನು ಸಲಹುವ ಚಾತಕವನ್ನೇ(ಮರಕುಟಿಕ) ನೋಡುತ್ತಾ ತನ್ನನ್ನೂ ತನ್ನಾಕೆಯನ್ನು ಕಲ್ಪಿಸಿಕೊಳ್ಳುತ್ತಾ, ತಮ್ಮದೇ ಲೋಕದಲ

ಕನಸುಗಳನ್ನು ತುಂಬಿಸಿಕೊಟ್ಟ ಗುರುಗಳಿಗೆ ಅಕ್ಷರ ನಮನ.....

Image
  ತಪ್ಪು ಮಾಡಿ ಬಿಟ್ಟೆನೋ, ಕೃತಘ್ನಳಂತೆ ವರ್ತಿಸಿದೆನೋ ಎಂಬ ಕೊರಗು ಬಹಳ ದಿನಗಳಿಂದ ಕಾಡ್ತಾ ಇದೆ. ಕೆಲವೊಂದು ವಿಷಯಗಳ ಬಗ್ಗೆ ನನಿಗೆ ತೋಚಿದಂತೆ ಗೀಚಿದ್ದೇನೆ, ಆದರೆ ಲೇಖನಿಯೊಳಗೆ ಷಾಯಿ ತುಂಬಿ, ತುಂ ಬಿಸಲೂ ಕಲಿಸಿದ ಆ ಮಹಾನುಭಾವನಿಗೆ ಅಕ್ಷರ ನಮನ ಸಲ್ಲಿಸಲೇ ಇಲ್ಲ. ಅವರು ನನ್ನಂತಹ ಹಲವು ವಿದ್ಯಾರ್ಥಿಗಳ ಪಾಲಿಗೆ ಹೀರೋ. ಆಕಾರವೇ ಇಲ್ಲದ ಕಲ್ಲುಗಳಿಗೆ ರೂಪ ಕೊಟ್ಟ ಶಿಲ್ಪಿ. ಮನಸಿನ ಕ್ಯಾನ್ವಸ್ ನಲ್ಲಿ ರಂಗ್ ರಂಗಿನ ಚಿತ್ರ ಬಿಡಿಸಿದ ಕಲಾಕಾರ. ನಾನು ಭಾಗ್ಯಶಾಲಿ, ಅಂತಹ ಅದ್ಭುತ ವ್ಯಕ್ತಿತ್ವ ದ ಅಪೂರ್ವ ಶಿಕ್ಷಕರೋರ್ವರು ದೊರಕಿದ್ದು. ಅತ್ಯಂತ ಹೆಮ್ಮೆಯಿಂದ ಬರಿತೇನೆ ನಾನು ಓದಿದ್ದು "ವಿದ್ಯಾಬೋಧಿನೀ ಪ್ರೌಢ ಶಾಲೆ ಬಾಳಿಲ"ದಲ್ಲಿ ಅಂತ. ಅಷ್ಟೇ ಖುಷಿಯಿಂದ ಮನತುಂಬಿ ಬರೀತೇನೆ "ಎಂ.ಜೆ. ರವೀಂದ್ರನಾಥ ಶಿಶಿಲ"ರ "ಸಮಾಜ" ಪಾಠವನ್ನು ನಾನು ಕೇಳಿದೇನೆ, ಅವರ ಕೈಯಿಂದ ಇಂಗ್ಲಿಷ್ ನ್ನು ಕಲ್ತಿದೇನೆ. ಹಳ್ಳಿಗಳ ಸರಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಸಾಮಾನ್ಯ ರೈತಾಪಿ ಕಟುಂಬದಿಂದ ಬಂದ ನನ್ನಂತ ಬಾವಿಯೊಳಗಿನ ಕಪ್ಪೆಗಳೇ ಹೆಚ್ಚಾಗಿ ತುಂಬಿದ್ದ ತರಗತಿಗಳವು. ಪ್ರಪಂಚದ ಬಗ್ಗೆ ಅರಿವೇ ಇಲ್ಲದ ಭವಿಷ್ಯದ ಬಗ್ಗೆ ಊಹಿಸುವಷ್ಟೂ ಜ್ಞಾನವಿಲ್ಲದ ಬದುಕಿನ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಾಗದಷ್ಟು ಮೌಢ್ಯ,ಮುಸುಕು. ಬಹುಷಃ ಆ ಅಜ್ಞಾನದ ಪರದೆಯನ್ನು ಸರಿಸಲು ಕಾಲನ ಪಾತ್ರ ಎಷ್ಟಿತ್ತೋ ಅಷ್ಟೇ ರವೀಂ

ಪುಟ್ಟ ಪ್ರಪಂಚ....

Image
    ಹಾಸಿಗೆಯ ಮೇಲಿನ ಬೆಡ್ ಶೀಟನ್ನು ತೆಗೆದು ಅದರಲ್ಲಿದ್ದ ಧೂಳು ಹಾರುವಂತೆ ಒಮ್ಮೆ ಜೋರಾಗಿ ಹೊಡೆದು ಮತ್ತೆ ಹಾಸಿ ಮಲಗಬೇಕೆನ್ನುವಷ್ಟರಲ್ಲಿ ಬೆರಳಲ್ಲಿದ್ದ ಉಂಗುರ ಜಾರಿ ಬುಗುರಿಯಂತೆ ಸುತ್ತ ತಿರು ತಿರುಗಿ ಬಿತ್ತು. ಒಂದರೆಕ್ಷಣ ಉಂಗುರ ಕಳೆದುಹೋಯಿತೇನೋ ಎಂಬ ಭಯ ಸುಳಿದಂತಾದರು  ಕಣ್ಣ ಮುಂದೆಯೇ ಬಿದ್ದಿತ್ತು. ಹ್ಮ್ಂ!! ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ ಇವರೇ ನನಗೆ ಈ ಉಂಗುರ ಹಾಕಿದ್ದು. ಐದು ಎರಡೇಳು ಮೂರು ಹತ್ತು ವರ್ಷವೇ ಕಳೆಯಿತು ಮದುವೆಯಾಗಿ. ಆವಾಗ ಈ ಉಂಗುರ ನನ್ನ ಬೆರಳಿಗೆ ಚಿಕ್ಕದಾಗಿತ್ತು. ಅದೆಂತೋ ಕಷ್ಟ ಪಟ್ಟು ಅಜ್ಜಿ, ತಂಗಿ ಎಲ್ಲರೂ ಸೇರಿ ಹಾಕಿದ್ದು. ಇದೀಗ ಕೈಯ್ಯಿಂದ ತಂತಾನೇ ಜಾರಿ ಹೋಗುವಷ್ಟು ದೊಡ್ಡದಾಯಿತೇ? ಚಿಕ್ಕದೊಂದು ನಗು ಮೂಡಿ ಮರೆಯಾಯಿತು ಅವಳ ಮುಖದಲಿ. ಬಿಕ್ಕಿ ಬಿಕ್ಕಿ ಅಳುವಷ್ಟು ಭೀಕರವಾದ ಕಥೆಯೇನು ನಡೆದಿಲ್ಲ ಬದುಕಲ್ಲಿ. ಆದರೆ, ಬದುಕಲ್ಲಿ ಹೊಸತೇನೂ ಇಲ್ಲ. ಹೊಸತರ ಕಲ್ಪನೆಯೂ ಆಕೆಯಲ್ಲಿಲ್ಲ. ಗಂಡ ದಿನಾ ಬೆಳ್ಳಗ್ಗೆ ಆಫೀಸ್‍ಗೆ ಹೋಗಿ ಸಾಯಂಕಾಲ ಬರ್ತಾನೆ. ಮಕ್ಕಳು ಶಾಲೆಗೆ ಹೋಗಿ ಬರ್ತಾವೆ. ಮನೆಯಲ್ಲಿರುವ ಮಾವನ ಆರೈಕೆ, ಅವರ ಸೇವೆ, ಮನೆ ಗೆಲಸ, ಬಂದು ಹೋಗುವ ನೆಂಟರಿಷ್ಟರ ಉಪಚಾರ, ಎಲ್ಲರೂ ರಜೆಯಲ್ಲಿರುವ ದಿನ ಎಲ್ಲಾದರೂ ಸುತ್ತಾಟ, ಅಥವಾ ಮನೆಯಲ್ಲೇ ಏನಾದರು ವಿಶೇಷ ಅಡುಗೆ. ಎರಡು ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ ತವರು ಮನೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೊಸ ಸೀರೆ, ಉಡುಗೆಗಳು. ದಿನಾ ಸಂಜೆ

ಒಂದ್ ಹತ್ತ್ ನಿಮಿಷಕ್ಕೆ.........

Image
      ಒಬ್ಬ ಅದ್ಭುತ ಮಾತುಗಾರನ ಅದ್ಭುತವಾದ ಮಾತುಗಳನ್ನು ಕೇಳ್ತಿದ್ದೆ. ಆತ ಹೇಳ್ತಾನೆ ''ನಮ್ಮೊಳಗೊಬ್ಬ ಸಲಹೆಗಾರ,  ನಮ್ಮ ಹಿತೈಷಿ ಇರ್ತಾನೆ. ಆತ ಯಾವಾಗ್ಲೂ ನೋಡು, ಇದು ಕೆಟ್ಟದು ಹೀಗ್ ಮಾಡ್ಬೇಡ, ಅಂತ ನಾವು ತಪ್ಪು ದಾರಿ ತುಳಿಯುವಾಗ ಎಚ್ಚರಿಸ್ತಾ ಇರ್ತಾನೆ. ಆದ್ರೆ ನಾವೇನ್ ಮಾಡ್ತೇವೆ ಅಂದ್ರೆ ಅವ್ನ ತಲೆ ಮೇಲ್ ಪಟ್ ಅಂತ ಹೊಡ್ದು ಸುಮ್ನಿರು, ಪಕ್ಕದವ್ನ್ ಮಾಡ್ತಾನೆ, ನನ್ ಫ್ರೆಂಡ್ ಮಾಡ್ತಾನೆ ನಾನ್ಯಾಕೆ ಹೀಗ್ ಮಾಡ್ಬಾರ್ದು? ಅಂತ ಅವ್ನ ಮಾತನ್ನು ಕಡೆಗಣಿಸಿ ಮೂಲೆಗ್ ತಳ್ತೇವೆ. ಅವ್ನು ಒಂದು ನಾಲ್ಕೈದು ಬಾರಿ ಆ ರೀತಿ ಹೇಳ್ತಾನೆ. ಪ್ರತಿ ಬಾರಿಯೂ ಅವ್ನ್ ತಲೆ ಮೇಲ್ ಹೊಡ್ದು ಸುಮ್ನೆ ಕೂತ್ಕೊಳಿಸ್ತೇವೆ. ಆಮೇಲೆ ಅವ್ನು ನಮ್ ಜೊತೆ ಮಾತಡೋದೇ ಬಿಟ್‌ಬಿಡ್ತಾನೆ. ಅವ್ನೇ ಆತ್ಮ. ಆತ ಪೂರ್ತಿಯಾಗಿ ಸತ್ತೋಗ್ತಾನೆ. ಆಮೇಲೆ ನಮ್ಮನ್ನು ಹೇಳೋರ್ ಕೇಳೋರ್ ಇರೋದೇ ಇಲ್ಲ.  ಬೇಕಾ ಬಿಟ್ಟಿ ಮನಸ್ಸು ಎಲ್ಲೆಲ್ಲೋ ಹರಿ ಬಿಡ್ತೇವೆ. ಮುಟ್ಬೇಕಾದ ಗುರಿಯನ್ನ ಮುಟ್ಟೋದಕ್ಕೆ ಸಾಧ್ಯಾನೇ ಆಗೋದಿಲ್ಲ. ಗೆಳೆಯರೇ ಆತ್ಮ ಶಕ್ತಿಯನ್ನ ಕಳಕೊಂಡ ಮನುಷ್ಯ ಬದುಕಿದ್ದು ಸತ್ ಹಾಗೆ. '' ಅಂತ.           ನಿಜ, ಯಾವಾಗ್ಲು ಅಂದ್ಕೊಳ್ಳೋದು ನಾನು, ಇಲ್ಲ ಇವತ್ತಿನಿಂದ ಮೊಬೈಲ್ ಕಡಿಮೆ ಯೂಸ್ ಮಾಡ್ತೇನೆ. ಅದ್ರಿಂದ ದೂರ ಇರ್ತೇನೆ ಅಂತ. ಆದ್ರದು ಸಾಧ್ಯವೇ ಅಗೋದಿಲ್ಲ. ಯಾಕಂದ್ರೆ ಅದಾಗ್ಲೆ ಅವ್ನ ತಲೆ ಮೇಲ್ ಹೊಡ್ದು ಸುಮ್ನೆ ಕೂತ್ಕೊಳ್ಸಿದೇನೆ.  ಪರಿಣಾಮ ಮೊ

ಪುಟ್ಟದೊಂದು ಜಿಜ್ಞಾಸೆ....

Image
    ದುಃಖ ಯಾಕಾಗ್ತದೆ ಅಂತಂದ್ರೆ, ನಂಗೆ ನನ್ನ ಜೀವನವನ್ನು ಬಿಟ್ಟು ಬೇರೆಲ್ಲರ ಜೀವನವನ್ನೂ ಸಂಭ್ರಮಿಸ್ಲಿಕ್ ಸಾಧ್ಯ! ಓಹ್, ಅವನೊಬ್ಬ ಸಿನಿಮಾ ನಾಯಕ, ದಿನಾ ಅವನ ಬಗ್ಗೆ ಟಿವಿಲಿ ಬರ್ತಾ ಇರ್ತದೆ. ವ್ಹಾ! ಅವನಿಗೆಷ್ಟ್ ಚಂದ.  ''ವೈದ್ಯೋ ನಾರಾಯಣೋ ಹರಿಃ'' ಅವನೊಬ್ಬ ಡಾಕ್ಟರ್, ಸಮಾಜದಲ್ಲಿ ಎಷ್ಟೊಂದು ದೊಡ್ಡ ಸ್ಥಾನ ಇದೆ ಆತನಿಗೆ, ಎಲ್ಲರೂ ಡಾಕ್ಟ್ರೇ ಅಂತ ಎಷ್ಟು ಗೌರವ ಕೊಡ್ತಾರೆ, ಅವನ ಬದುಕೆಷ್ಟು ಸುಂದರ ಅನ್ನಿಸ್ತದೆ.  ಅವನೆಷ್ಟು ಚನ್ನಾಗ್ ಚಿತ್ರ ಮಾಡ್ತಾನೆ, ಎಲ್ರು ಅವನ ಬಗ್ಗೆ ಗ್ರೇಟ್ ಅಂತ ಕಮೆಂಟ್ ಮಾಡ್ತಾರೆ, ಎಲ್ಲೇ ಹೋದ್ರು ಅವನಿಗೆ ಮನ್ನಣೆ ಸಿಕ್ತದೆ.  ಅವಳೆಷ್ಟ್ ಚಂದ, ಬೇಕಾದಷ್ಟು ಹಣ ಇದೆ, ರಿಚ್ ಫ್ಯಾಮಿಲಿಯಿಂದ ಬಂದವಳು, ಅಷ್ಟೊಂದು ದೊಡ್ಡ ಕಾಲೇಜಲ್ಲಿ ಕಲಿತಾ ಇದಾಳೆ, ಎಷ್ಟು ಜನ ಫ್ರೆಂಡ್ಸ್ ಇದಾರೆ, ಅವಳ ಫೇಸ್ ಬುಕ್ ಪ್ರೊಫೈಲ್ ನೋಡಿದ್ರೆ ತಿಳಿತದೆ ಅವಳ ಲೈಫ್ ಎಷ್ಟು ಬ್ಯೂಟಿಫುಲ್ ಅಂತ.  ಹೀಗೆ ನಾನು ನನ್ನನ್ನ ಅವ್ರೆಲ್ಲರ ಜೊತೆ ಹೋಲಿಸಿಕೊಳ್ಳೋದು ಮತ್ತು ಕೊರಗುವುದು, ಜೊತೆಗೆ ಅವರು ಅವರ ಬದುಕನ್ನು ಎಷ್ಟರ ಮಟ್ಟಿಗೆ ಸಂಭ್ರಮಿಸಿದ್ದಾರೋ ನಾ ಕಾಣೆ, ಆದರೆ ನಾನು ಮಾತ್ರ ಅವರೆಲ್ಲರ ಬದುಕನ್ನು ಸಂಭ್ರಮಿಸ್ತೇನೆ, ಕೆಲವೊಮ್ಮೆ ಅದೆಷ್ಟು ಅವಿವೇಕವಾಗಿ ಅಂತಂದ್ರೆ ಕೇವಲ ಕೆಲವರ ಫೇಸ್ ಬುಕ್ ಪ್ರೊಫೈಲ್ ನೋಡಿ ಅವರು ಅಪ್‍ಲೋಡ್ ಮಾಡಿದ ಸುಂದರ ಚಿತ್ರಗಳನ್ನು ನೋಡಿ ನನಗೆ ಇಂತಹ ಭಾಗ್ಯ ಬರ್ಲಿಕ್ಕೇ ಇಲ್ಲ

ಒಂಟಿ ಹಕ್ಕಿ.....

Image
ಅದೊಂದು ಒಂಟಿ ಹಕ್ಕಿ, ಆಕಾಶದಲ್ಲಿ ಹಾರಾಡ್ತಾ ಇತ್ತು. ಅದಕ್ಕೊಂದು ಆಸೆ ನಾನು ಮೋಡಳಿಂದಾಚೆಗೆ ಹೋಗಿ ತನ್ನವರು ನೆಲೆಸಿರುವ ಜಾಗ ಸೇರಬೇಕು'' ಅಂತ.  ಆದರೆ ಅದು ಬಹಳ ದೂರ, ಹಾದಿಯೂ ತಿಳಿಯದು. ಪಾಪ! ಅದಕ್ಕಾಗಿ ತುಂಬಾ ಕಷ್ಟ ಪಡ್ತಾ ಇತ್ತು. ಪ್ರತಿದಿನ ಹಾರಾಟದ ಅಭ್ಯಾಸ ನಡೆಸ್ತಾ ಇತ್ತು. ತನ್ನ ಸಾಮಾರ್ಥ್ಯದ ಬಗ್ಗೆ ಅರಿವಿದ್ದ ಆ ಹಕ್ಕಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಿಕ್ಕೆ ತುಂಬಾ ಪ್ರಯತ್ನ ಪಡ್ತಿತ್ತು. ಒಂದೊಮ್ಮೆ ಅದರ ಗೆಳೆಯನೊಬ್ಬ ಹೇಳ್ತಾನೆ, ನೋಡೋ ಮಹಾರಾಯ, ನೀನು ಇನ್ನೂ ಆಚೆಗ್ ಹೋಗ್ಬೇಕಾದ್ರೆ ನೀನ್ ಈಗಿರುವ ಸ್ಥಿತಿಲಿ ಸಾಧ್ಯ ಇಲ್ಲ. ಇಲ್ಲಿಂದ ಏಳು ಸಾವಿರ ಪರ್ವತಗಳನ್ನು ದಾಟಿ ಹೋಗು. ಅಲ್ಲೊಂದು ಸನ್ಯಾಸಿಗಳ ಆಶ್ರಮ ಇದೆ. ಆ ಸ್ವಾಮಿಗಳ ಸೇವೆ ಮಾಡಿದ್ರೆ ನಿನಗೆ ಒಂದು ದಿವ್ಯ ವಾದ ಔಷಧ ಕೊಡ್ತಾರೆ. ಆ ಔಷಧ ಸೇವಿಸಿದ್ರೆ ನೀನಿನ್ನೂ ಬಲಿಷ್ಟ ಆಗ್ತೀಯ. ಖಂಡಿತಾ ಗುರಿ ತಲುಪ್ಲಿಕ್ ಸಾಧ್ಯ ಆಗ್ತದೆ ಅಂತ. ಹ್ಮ್ಂ!! ಈ ಗೆಳೆಯನ ಮಾತು ಸರಿ. ಇದೇ ಕಾಡಲ್ಲಿದ್ದು, ನನ್ನಷ್ಟಕ್ಕೇ ನಾನ್ ಕಷ್ಟ ಪಡ್ತಾ ಇದ್ರೆ ಏನ್ ಪ್ರಯೋಜನ. ಯಾರದಾದ್ರು ಸಲಹೆ, ಸಹಾಯ ಸಿಕ್ಕಿದ್ರೆ ಗಡಿ ಮುಟ್ಬೋದಲ್ಲಾ ಅಂದ್ಕೊಂಡು ಗೆಳೆಯನ ಸಲಹೆಯಂತೆ ಸನ್ಯಾಸಿಗಳನ್ನು ಹುಡುಕಿಕೊಂಡು ಹೊರಟಿತು. ಅದು ಬಹಳ ದೂರ ಸಾಗಬೇಕಾಗಿತ್ತು. ಹೀಗೆ ಹೊರಟ ಒಂಟಿ ಹಕ್ಕಿ ಬಹಳ ಪ್ರಾಯಾಸದಿಂದ ಮೂರು ಸಾವಿರ ಪರ್ವತಗಳನ್ನು ದಾಟಿತು. ಅದಾಗಲೇ ಆ ಪ್ರದೇಶದಲ್ಲಿ ಚಳಿಗಾಲ ಆವರಿಸಿತು. ಒಂಟಿ ಹಕ್ಕಿಗ

ಅಸ್ತಂಗತವಾಗದ ಅನಾಥ ನಕ್ಷತ್ರ

Image
ಬಾಳ ಪಯಣ ನಿರಂತರ ಪಾಪಿ ಹೃದಯ ಒಂಥರಾ ಅನಾಥವಾದ ಬೆಂತರಾ ಸುಖವೋ, ಸಾವೋ, ಒಲವೋ ದ್ವೇಷವೋ ನರನೆ ನರಳಿದಿರೂ ಈ ಪ್ರೀತಿ ಸಾಯದಿರಲಿ ಸಹನೆ ನಿನ್ನ ನೆರಳಾಗಿರಲಿ ತೋರುವುದು ತೊರೆವೆನೆಂದು ತೊರೆಯೊಂದು ಹರಿವುದು ಹಗಲೇನು,ಇರುಳೇನು ನಿನಗಾಗಿ ನಿನ್ನೊಳಿತಿಗಾಗಿ ಭಗವಂತನೇ ಈ ಬಯಲಲಿ ನನ್ನವರು ಯಾರು?

ಒಮ್ಮೊಮ್ಮೆ ಹೀಗೂ ಆಗುವುದು....

Image
         ವಯಸ್ಸು ಎಪ್ಪತ್ತಾಗ್ಲಿಲ್ಲ, ಆದ್ರೂ ಇಪ್ಪತ್ತರ ಹುಮ್ಮಸ್ಸಿಲ್ಲ. ಬದುಕಲ್ಲಿ ಇಂಟರೆಸ್ಟೇ ಇಲ್ಲ. ಬದುಕಬೇಕು ಅಂತ ಅನ್ನಿಸ್ತಾನೇ ಇಲ್ಲ. ಹಾಗಂತ ಸಾಯ್ಲಿಕ್ಕೂ ಬೋರು. ‘ಬೇಕು’ ಅನ್ನಿಸುವುದಿಲ್ಲ, ಬೇಡಾಂತಲೂ ಅನ್ನಿಸುವುದಿಲ್ಲ. ಚೈತನ್ಯ ಇಲ್ಲ. ಶಕ್ತಿ ಇದೆಯಾ ಅಂತ  ಪರೀಕ್ಷಿಸ್ಲಿಕ್ಕೆ ಮನಸ್ಸಿಲ್ಲ. ನಿರ್ಲಿಪ್ತ ಭಾವ. ಬ್ರೇಕ್ ಇಲ್ಲದ, ಚೈನ್ ಕಟ್ಟಾದ, ಟಯರ್ ಪಂಕ್ಚರ್ ಆದ, ಸೀಟು ಹರಿದ, ಕ್ಯಾರಿಯರ್ ಮುರಿದ, ಪೆಡಲ್ ಲೂಸ್ ಆದ, ಎಣ್ಣೆ ನೀರು ಕಾಣದೆ ಧೂಳು ಹಿಡಿದು ಮೂಲೆಯಲ್ಲಿ ಬಿದ್ದ ಹಳೇ ಗುಜುರಿ ಹರ್ಕ್ಯುಲೆಸ್ ಸೈಕಲ್ ನಂತಾಗಿದೆ ಜೀವನ. ಏಕೋ ಏನೋ, ನಗ್ಲಿಕ್ಕಿಷ್ಟ ಇಲ್ಲ, ನಗಿಸ್ಲಿಕ್ಕೆ ಇಷ್ಟ ಇಲ್ಲ, ಅಳ್ಲಿಕ್ಕೆ ಇಷ್ಟ ಇಲ್ಲ, ಅಳಿಸ್ಲಿಕ್ಕೂ ಇಷ್ಟ ಇಲ್ಲ. ಹಾಡ್ಲಿಕ್ಕೆ ಇಷ್ಟ ಇಲ್ಲ, ಕುಣಿಲಿಕ್ಕಿಷ್ಟ ಇಲ್ಲ, ಆಡ್ಲಿಕ್ಕೆ , ಓದ್ಲಿಕ್ಕೆ ಬರೀಲಿಕ್ಕೆ ಯಾವುದಕ್ಕೂ ಮನಸ್ಸೇ ಇಲ್ಲ. ಮೂಗಿನ ಮೇಲೆ ಜೋರಾಗಿ ಒಂದೇಟು ಕೊಟ್ರೂ ಪಕ್ಕಾ ಕನ್ನಡಿಗರಾದ ಕಣ್ಣುಗಳು ಒಂದು ಬಿಂದು ನೀರನ್ನೂ ಬಿಟ್ಟುಕೊಡುವುದಿಲ್ಲ. ದ್ವೇಷ, ಅಸೂಯೆ, ದುಃಖ ಯಾವುದೂ ಸೃಷ್ಟಿ ಆಗ್ತಾನೇ ಇಲ್ಲ. ಶೃಂಗಾರ, ಹಾಸ್ಯ, ಕರುಣ, ಭೀಭತ್ಸ್ಯ ಮೊದಲಾದವು ಒಣಗಿ ಹೋಗಿದೆಯೋ, ಬತ್ತಿ ಹೋಗಿದೆಯೋ ಅಲ್ಲ ಇನ್ನು ಸತ್ತೇ ಹೋಗಿದೆಯೋ ನಾನರಿಯೆ… ಮೆಸೇಜ್ ಬಂದ್ರೆ ರಿಪ್ಲೈ ಮಾಡ್ಲಿಕ್ಕಿಷ್ಟ ಇಲ್ಲ, ಕಾಲ್ ರಿಸೀವ್ ಮಾಡುವ ಗೋಜಿಗೆ ಹೋಗುವುದೇ ಇಲ್ಲ. ವಾಟ್ಸಪ್, ಫೇಸ್ ಬುಕ್, ಹೈಕ್, ಹ್ಯಾಂಗ್ ಔಟ್,

ಒಲವಿಗೂ...... ಈ ನಗುವಿಗೂ.....

Image
ನಗುವೇ, ನೀ ನನ್ನೊಳು ಆಗು ಜೀವಂತಾ ಒಲವೇ, ಬಂದ ನೋಡು ನಿನ್ನಯಾ ಸಖಾ... ಒಲವಿಗು ಈ ನಗುವಿಗೂ ಅದೇಕೋ ಚಿಕ್ಕ ಮುನಿಸು ಖಾಲಿ ಇರದ ಗೂಡಿನಲ್ಲಿ ಒಲವು ಇನಿತು ಬಂದು ತುಂಬಿ ಎಲ್ಲೋ ಹೋದವು ಆ ಮನದ ಮಲಗಳು ಅಲ್ಲೇ ಸ್ನೇಹವಾಯಿತು, ಒಲವಿಗೂ.... ನಗುವಿಗೂ.... ಅಲ್ಲಿ ಒಲವಿದೆ, ಅದಕಾಗಿಯೇ ಹುಸಿಮುನಿಸು ಒಲವು ಸುಂದರ ರಾಜಕುಮಾರಿ ನಗು ಒಬ್ಬ ಸಾಹುಕಾರ... ಹೊರ ನಡೆದ ಅಲ್ಲಿಂದ ತಣ್ಣಗಾಗಿ.... ಗೂಡು ಮತ್ತೆ ಖಾಲಿ, ಅರಿಯದೇ ನಿನ್ನ ಖಯಾಲೀ.... ಆಗಲೇ ಆಗಮನವಾಯಿತೂ ಆ ಬೇಸರ, ಯೋಚನೆ, ನೋವಿನಾ ನೂಲು... ಒಲವು ಏಕಾಂಗಿಯಾಗಿ ಬಂಧಿಯಾಯಿತು ಬೆಂದು ಹೋಯಿತು, ಕೊನೆಗೆ ನಂದ ಹೊರಟಿತು ಅಳುವೂ ಇದನು ಕಂಡು ಅತ್ತು ಬಿಟ್ಟಿತು ಹನಿಯೊಂದು ಜಿಗಿದು ಹೋಗಿ ನಗುವ ಕರೆಯಿತು ನಗುವು ಪುನಃ ಮರಳಿತು.... ಗೂಡು ಮತ್ತೆ ತುಂಬಿತು, ಭಾವ ಹರಿಯಿತು