Posts

Showing posts from July, 2018

ಖುಷಿಗಾಗಿ ಬದುಕುವುದು ತಪ್ಪಲ್ಲ.....

Image
          ''ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ''    ಬಸವಣ್ಣನವರ ಈ ವಚನವನ್ನು ನಾನು ಆಗಾಗ ಜ್ಞಾಪಿಸಿಕೊಳ್ಳೋದಿದೆ. ಕೆಲವೊಂದ್ಸಲ ಅನ್ನಿಸುವುದು, ಛೆ, ನಾನು ಹಾಗ್ ಮಾಡಿದ್ದು ತಪ್ಪಾ, ನಾನು ಹೀಗ್ ಮಾಡ್ಬೇಕಿತ್ತಾ? ನಾನ್ ಹಾಗ್ ಹೇಳೋ ಬದಲು ಸುಮ್ನಿದ್ರೆ ಒಳ್ಳೇದಿತ್ತಾ? ಹೀಗೆ ಇನ್ನೊಂದಷ್ಟು. ನೀವೂ ಜೀವನದಲ್ಲಿ ಇಂತಹ ಸಿಚುವೇಷನ್‍ಗೆ ಅಗಾಗ ತುತ್ತಾಗ್ತಾ ಇರಬಹುದು. ನಾನ್ ಮಾಡಿದ್ದು ತಪ್ಪೇನೋ, ತಪ್ಪೇನೋ ಅನ್ನೋ ಪ್ರಶ್ನೆ ಕಾಡ್ತಾನೇ ಇರಬಹುದು. ಹಲವು ಸಲ ಹೇಗೆ ಬದುಕುವುದು ಸರಿ? ಹೇಗೆ ಇದ್ರೆ ಒಳ್ಳೆಯದು? ಒಳ್ಳೆವನಾಗ್ಲಿಕ್ಕೆ ಏನು ಮಾಡ್ಬೇಕು? ಹೀಗೆ ಗೊಂದಲದಲ್ಲಿಯೇ ಮುಳುಗಿರ್ತೇವೆ. ಛೇ ಅವ ನನ್ನ ಬೆಸ್ಟ್ ಫ್ರೆಂಡ್ ನನ್ನ ಮಾತಾಡಿಸ್ತಾನೇ ಇಲ್ಲ. ನನ್ನ ಮಾತಿಗೂ ರಿಪ್ಲೇ ಮಾಡ್ತಾ ಇಲ್ಲ. ನಾನೇನ್ ತಪ್ಪು ಮಾಡಿದೆ? ಆ ಆಂಟಿ ಒಬ್ರು ನಾನ್ ಹೀಗ್ ಮಾಡಿದ್ ಸರಿ ಇಲ್ಲ ಅಂತಂದ್ರು. ನಾನೇನ್ ತಪ್ಪು ಮಾಡಿದೆ? ನಮ್ಗೆ ಗೊತ್ತೇ ಆಗೋದಿಲ್ಲ. ಕೊನೆಗೆ ನಾನ್ ಸರಿ ಇಲ್ಲ. ಎಲ್ಲರಿಗೂ ಬೇಜಾರ್ ಮಾಡ್ತಾ ಬದುಕುವುದೇ ಪಾಡಾಯ್ತು ಅಂತ ತೀರಾ ಯೋಚನೆ ಮಾಡ್ತಾ ಚಿಂತೆಗೆ ಒಳಗಾಗ್ತೇವೆ.   ನನ್ನ ಪ್ರಕಾರ ಯಾವುದೂ ತಪ್ಪಲ್ಲ. ಈ ಜೀವನವನ್ನು ಅನುಭವಿಸಿ,  ಖುಷಿಯಾಗಿರಿ, ಅದಕ್ಕಾಗಿ ಏನೂ ಮಾಡಿದ್ರೂ ತಪ್ಪಲ್ಲ, ಬಸವಣ್ಣನವರ ಮೇಲಿನ ಸಾಲನ್ನು ಬಿಟ