Posts

Showing posts from August, 2018

ಮಾನ್ಸೂನ್ ಟ್ರಿಪ್ ೨೦೧೮ - 5

Image
ಸ್ವರ್ಣ ಮಂದಿರ.   ಪವಿತ್ರ  ಸ್ವರ್ಣ ಮಂದಿರ upper view    ಜ ಲಿಯನ್ ವಾಲಾಭಾಗ್‍ನ ಪಕ್ಕದಲ್ಲೇ ಸಿಖ್‌ರ ಪವಿತ್ರ ದೇವಾಲಯವಾದ ಸ್ವರ್ಣ ಮಂದಿರವಿದೆ. ಇದನ್ನು 'ಶ್ರೀ ಹರ್ ಮಂದಿರ್ ಸಾಹೀಬ್' ಎಂದೂ ಕರೆಯುವರು. ಪ್ರತಿದಿನ ಇಲ್ಲಿಗೆ ಸಾವಿರಾರು ಮಂದಿ ಭಕ್ತರು ಆಗಮಿಸುವರು, ಹೊರಗಡೆ ಚಪ್ಪಲ್ ಸ್ಟ್ಯಾಂಡ್‌ನಲ್ಲಿ ತುಂಬಾ ರಶ್ ಇತ್ತು. ಸುಮಾರು ೬ ರಿಂದ ೭ ದೊಡ್ಡ ದೊಡ್ಡ ಕೌಂಟರ್‌ಗಳು ಚಪ್ಪಲ್‌ಗಳನ್ನು ಸಂಗ್ರಹಿಸುವುದಕ್ಕಾಗಿ ಇದ್ದವು.  ಸಿಖ್ಖರು ಪರೋಪಕಾರದಲ್ಲಿ ಹಾಗೂ ಸೇವೆ ಮಾಡುವುದರಲ್ಲಿ ಎತ್ತಿದ ಕೈ. ಆಗ್ರಾದಲ್ಲಿ ಒಂದು ಗುರುದ್ವಾರವಿದೆ (ಗುರು ಕಾ ತಾಲ್).  ಬಿಡುವಿರುವಾಗ ನಾವು ಈ ಗುರುದ್ವಾರಕ್ಕೆ ಹೋಗುವುದಿದೆ. ದಕ್ಷಿಣ ಕನ್ನಡದಲ್ಲಿ ಹೇಗೆ ಹೆಚ್ಚಿನ ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಇರುತ್ತದೋ ಹಾಗೆ ಇಲ್ಲೆಲ್ಲಾ ಗುರುದ್ವಾರಗಳಲ್ಲಿ ಭೋಜನದ ವ್ಯವಸ್ಥೆ ಇರುತ್ತದೆ. ಮಹಿ ಯಾವಗಲೂ ಒಂದು ಮಾತು ಹೇಳುವುದಿದೆ, ''ಉತ್ತರ ಭಾರತದಲ್ಲಿ ಎಲ್ಲಾದರೂ ಬಂದು ಸಿಕ್ಕಿ ಹಾಕಿಕೊಂಡರೆ ಮೊದಲು ಗುರುದ್ವಾರಗಳೆಲ್ಲಿವೆ? ಅಂತ ಹುಡುಕಬೇಕಂತೆ, ಅಲ್ಲಿ ಖಂಡಿತಾ ನಮಗೆ ಬೇಕಾದ ಸಹಾಯ ಸಿಗಬಹುದು'' ಎಂದು. ಸಿಖ್ ಧರ್ಮ ಸ್ಥಾಪನೆಯ ಮುಖ್ಯ ಉದ್ದೇಶವೇ ಅದಾಗಿತ್ತು, ಸಮಾಜಕ್ಕೆ ನಿಸ್ವಾರ್ಥವಾದ ಸೇವೆಯನ್ನು ಕೊಡುವುದು ಹಾಗೂ ರಕ್ಷಿಸುವುದು. ನಾವು ಆಗ್ರಾದಲ್ಲಿ 'ಗುರು ಕಾ ತಾಲ್‌'ಗೆ ಹೋಗಿದ್ದಾಗ ನೋಡಿದ್ದೆವು, ಅದೆಷ್ಟೋ

ಮಾನ್ಸೂನ್ ಟ್ರಿಪ್ ೨೦೧೮ - 4

Image
ಜಲಿಯನ್ ವಾಲಾಭಾಗ್ ಭಾರತದ ಹೆಮ್ಮೆ ಉದಮ್ ಸಿಂಗ್      ನಮ್ಮ ಹೆತ್ತವರೋ, ಮನೆಯವರೋ , ಪಕ್ಕದ ಮನೆಯವರೋ ಅಥವಾ ನಮ್ಮ ಜನರು ಅಥವಾ ನಾವೇ, ನಮ್ಮೂರಲ್ಲೇ ಆಯೋಜಿಸಿರುವ ಯಾವುದೋ ಒಂದು ಸಭೆಗೋ  ಸಮಾರಂಭಕ್ಕೋ ಹೋಗಿರುತ್ತೇವೆ. ಯಾವುದೇ ಪೂರ್ವ ಸೂಚನೆ ಇಲ್ಲದೇ ಒಬ್ಬ ರಾಕ್ಷಸ ಅಲ್ಲಿ ಪ್ರತ್ಯಕ್ಷವಾಗಿ ನಮ್ಮವರನ್ನೆಲ್ಲಾ ಕೊಂದು ಬಿಟ್ಟರೆ? ಒಮ್ಮೆ ಯೋಚಿಸಿ ಪರಿಸ್ಥಿತಿ ಎಷ್ಟು ಭಯಾನಕವಾಗಿರಬಹುದು ಅಂತ. ಇಂತಹುದ್ದೇ ಒಂದು ಘೋರವಾದ ಘಟನೆ ೧೯೧೯ನೇ ಇಸವಿಯ ಏಪ್ರಿಲ್ ೧೩ರಂದು ಪಂಜಾಬ್‍ನ ಅಮೃತ್ ಸರ್‌ನಲ್ಲಿರುವ ಜಲಿಯನ್ ವಾಲಾಭಾಗ್ ಎಂಬಲ್ಲಿಯೂ  ನಡೆಯಿತು.      ಅದು 'ಬೈಶಾಖಿ ಹುಣ್ಣಿಮೆಯ' ಪವಿತ್ರ ದಿನ.(ಸಿಖ್ಖರ ಪವಿತ್ರ ದಿನ, ಹಬ್ಬದ ದಿನ). ಹತ್ತಿರದಲ್ಲೇ ಸ್ವರ್ಣ ಮಂದಿರ ಇರುವುದರಿಂದ ಅನೇಕ ಯಾತ್ರಾರ್ಥಿಗಳು ಅಲ್ಲಿ ನೆರೆದಿದ್ದರು. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಡಾ. ಸತ್ಯಪಾಲ್ ಹಾಗೂ ಡಾ. ಸೈಫುದ್ದೀನ್ ಅವರನ್ನು ಬ್ರಿಟಿಷ್ ಸರಕಾರ ಬಂಧಿಸಿತ್ತು. ಇದನ್ನು ಖಂಡಿಸಿ ಸಾವಿರಾರು ಮಂದಿ ಜನರು ಜಲಿಯನ್ ವಾಲಾಭಾಗ್ ಎಂಬಲ್ಲಿ ಶಾಂತಿಯುತವಾದ ಪ್ರತಿಭಟನೆ ನಡೆಸಲು ಸೇರಿದ್ದರು. ಜಲಿಯನ್ ವಾಲಾಭಾಗ್ ಒಂದು ಉದ್ಯಾನವನವಾಗಿತ್ತು, ಸುತ್ತಲೂ ಇಟ್ಟಿಗೆಯ ಗೋಡೆಯಿದ್ದು ಪ್ರವೇಶಕ್ಕೆ ಕೆಲವು ಪುಟ್ಟ ಪುಟ್ಟ ದ್ವಾರಗಳಿದ್ದವಾದರೂ ಅವುಗಳನ್ನು ಮುಚ್ಚಲಾಗಿತ್ತು. ಆಗಲೇ ಅಲ್ಲೊಬ್ಬ ರಾಕ್ಷಸ ಪ್ರತ್ಯಕ್ಷನಾಗುತ್ತಾನೆ. ಜನ ಇಲ್ಲಿ ಸೇರಿರುವುದು ತಿಳಿದ ಬ್ರಿ

ಮಾನ್ಸೂನ್ ಟ್ರಿಪ್ ೨೦೧೮ - 3

Image
೩೦/೦೭/೨೦೧೮  (ವೀರರ ನಾಡಿನಲ್ಲಿ)    ಬೆಳಗ್ಗೆ ೬.೩೦ರ ಸುಮಾರಿಗೆ ಅಮೃತ ಸರ ತಲುಪಿದೆವು. ಇಲ್ಲೂ ನಮ್ಮ ಸ್ವಾಗತಕ್ಕೆ ಟ್ಯಾಕ್ಸಿ ಆಟೋ , ಸೈಕಲ್ ಗಾಡಿಯವರು ಕಾದು ಕುಳಿತಿದ್ದರು. ಬಸ್‍ನಿಂದ ಇಳಿಯುತ್ತಿದ್ದಂತೇ ನಮ್ಮ ಲಗೇಜ್‍ಗಳನ್ನು ಹಿಡಿದುಕೊಳ್ಳಲು ಸಹಾಯಕ್ಕೆ ಮುಂದಾದರು. ಅವರ ಸಹಾಯವನ್ನು ಪ್ರೀತಿಯಿಂದಲೇ ನಿರಾಕರಿಸಿದೆವು. ನಮಗೆ ಅಮೃತ್ ಸರದಲ್ಲಿ ಒಳ್ಳೆಯ ಹೋಟೆಲ್ ಬುಕ್ ಮಾಡಿ ಕೊಡುವುದಾಗಿಯೂ ಎಲ್ಲಾ ಕಡೆ ಸುತ್ತಾಡಿಸುವುದಾಗಿಯೂ ಎಲ್ಲಾ ವ್ಯವಸ್ಥೆಗಳನ್ನು ಮಾದುವುದಾಗಿಯೂ ತಿಳಿಸಿದರು ಆ ನಮ್ಮ ಹಿತೈಷಿಗಳು. ಇಲ್ಲ ನಾವು ಸೈನಿಕ್ ಆರಾಮ್ ಘರ್‌ನಲ್ಲಿ ರೂಮ್ ಬುಕ್ ಮಾಡಿರುವೆವು ಎಂದದಕ್ಕೆ ಅದು ಹಳೇ ಕಟ್ಟದ ಜೊತೆಗೆ ಅಲ್ಲಿನ ವ್ಯವಸ್ಥೆ ಚೆನ್ನಾಗಿಲ್ಲ, ಅದಕ್ಕಿಂತ  ಒಳ್ಳೆಯದು ವ್ಯವಸ್ಥಿತವಾಗಿರುವುದು ನಾವು ತೋರಿಸಿ್ಕೊಡುತ್ತೇವೆ, ನಮ್ಮೊಂದಿಗೆ ಬನ್ನಿ ಕೇವಲ ೧೫೦೦ ರೂ ಕೊಟ್ಟರೆ ಸಾಕು ಎಂದರು. ಇಲ್ಲಾ ಸ್ವಾಮಿ ನಮಗೆ ಬೇಡ ಎಂದದಕ್ಕೆ ಇನ್ನೂ ಕಡಿಮೆಗೆ ಮಾಡಿ ಕೊಡುವುದಾಗಿ ಹೇಳಿದರು. ಈ ಪರಿಯಾದ ಉಪಟಳ ಹೆಚ್ಚಿನ ಎಲ್ಲಾ ಕಡೆಯೂ ನಮಗೆ ಎದುರಾಗಿದೆ, ನಾವು ಒಪ್ಪುವ ವರೆಗೂ ಬಿಡದೆ ರಚ್ಚೆ ಹಿಡಿಯುತ್ತಿದ್ದರು.  ಕೊನೆಗೆ ಸೈನಿಕ್ ಆರಾಮ್ ಘರ್‍ಗೆ ಬಿಡುವುದಾಗಿ ಹೇಳಿದರು, ೧೦೦ ರೂಪಾಯಿ ಕೊಡಬೇಕಾಗಿ ತಿಳಿಸಿದರು. ಒಲಾ ದಲ್ಲಿ ನೋಡಿದಾಗ ೭೦-೮೦ ರೂಪಾಯಿತೋರಿಸುತ್ತಿತ್ತು. ಒಲಾ ಬುಕ್ ಮಾಡಿ ಸೈನಿಕ್ ಆರಾಮ್ ಘರ್ ತಲುಪಿದೆವು. ರೂಮ್ ಸಿಕ್ಕಿತು, ಅಲ್ಲಿ ಫ್ರೆಶ್

ಮಾನ್ಸೂನ್ ಟ್ರಿಪ್ ೨೦೧೮ -2

Image
೨೯/೦೭/೨೦೧೮    ಬೆಳಗ್ಗೆ ನಮ್ಮ ಟ್ರೈನ್ ( ಪಂಚವಲ್ಲೀ ಎಕ್ಸ್ ಪ್ರೆಸ್) ಎಲ್ಲಿಗೆ ತಲುಪಿದೆ ಎಂದು ಚೆಕ್ ಮಾಡುವಾಗ ನಿನ್ನೆ ಎಲ್ಲಿತ್ತೋ ಅಲ್ಲೇ ಇದ್ದಂತೆ ತೋರಿಸುತ್ತಿತ್ತು, ಮುಂದೆ ಬಂದ ಸೂಚನೆಯೇ ಇಲ್ಲ. ಇದೇಕೆ ಹೀಗೆ ಎಂಬ ಅನುಮಾನ ಶುರುವಾಯಿತು. ಮಧ್ಯಾಹ್ನ ಊಟ ಮಾಡಿ, ಫ಼್ರಿಡ್ಜ್‌ನಲ್ಲಿದ್ದ ವಸ್ತುಗಳನ್ನೆಲ್ಲ ಖಾಲಿ ಮಾಡಿ, ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನೆಲ್ಲಾ ಭದ್ರವಾಗಿರಿಸಿ, ರಾತ್ರಿ ಊಟಕ್ಕೆ ನೀರು ದೋಸೆ, ಜೊತೆಗೆ ಕಿಸಾನ್ ಮಿಕ್ಸ್ಡ್ ಫ್ರೂಟ್ ಜಾಮ್ ಪ್ಯಾಕ್ ಮಾಡಿ, ಉಳಿದಿದ್ದ ಕುಡಿಯುವ ನೀರನ್ನು ಬಾಟಲಿಗಳಿಗೆ ತುಂಬಿಸಿ ತೆಗೆದುಕೊಂಡೆವು. ಫ಼್ರಿಡ್ಜ್ ಕನೆಕ್ಶನ್, ಗ್ಯಾಸ್ ಕನೆಕ್ಷನ್ ಎಲ್ಲ ತಪ್ಪಿಸಿ, ದೇವರಿಗೆ ಕೈ ಮುಗಿದು ಪ್ರಾರ್ಥಿಸಿ, ಮನೆಯಲ್ಲಿದ್ದ ವಸ್ತುಗಳಿಗೆಲ್ಲಾ ಬಯ್ ಬಾಯ್ ಹೇಳಿ ಹೊರಟೆವು.  ಸಂಜೆ ೪.೨೦ಕ್ಕೆ ಆಗ್ರಾ ಕ್ಯಾಂಟ್ ರೈಲ್ವೇ ಸ್ಟೇಷನ್‌ನಿಂದ ರೈಲ್ ಹತ್ತ ಬೇಕಾಗಿದ್ದುದರಿಂದ ೩.೩೦ಕ್ಕೆ ಮನೆಯಿಂದ ಹೊರಟೆವು. ಒಂದು ಎಲೆಕ್ಟ್ರಿಕ್ ರಿಕ್ಷಾದ ಮೂಲಕ ರೈಲ್ವೇ ಸ್ಟೇಷನ್ ತಲುಪಿದೆವು. ಆ ಸಮಯದಲ್ಲಿ ಬಂದು ಹೋಗುವ ಎಲ್ಲಾ ರೈಲ್‌ಗಳ ಬಗ್ಗೆಯೂ ಅಲ್ಲಿ ಅನೌಂನ್ಸ್‌ಮೆಂಟ್‌ಗಳು ಮಾಹಿತಿಗಳು ಸಿಗುತ್ತಿದ್ದರೂ ನಮ್ಮ ಪಂಚವಲ್ಲಿ ಎಕ್ಸ್‌ಪ್ರೆಸ್‌ನ ಬಗ್ಗೆ ಸುದ್ದಿಯೇ ಇಲ್ಲ. ಅರೆ, ಏನಾಯಿತು? ಎಂದು ವಿಚಾರಿಸಿದಾಗ, ಮಹಾರಾಷ್ಟ್ರದಿಂದ ರೈಲು ಹೊರಟಿದ್ದು, ಅದನ್ನು ಮಧ್ಯಪ್ರದೇಶದಲ್ಲೆಲ್ಲೋ ಬೇರೊಂದು ರೈಲಿನೊಂದಿಗೆ ಮರ್ಜ್ ಮಾಡಲಾಗಿದ

ಮಾನ್ಸೂನ್ ಟ್ರಿಪ್ ೨೦೧೮ - 1

Image
    ದಿನಾಂಕ ೨೯ ಜುಲಾಯಿ ೨೦೧೮ ರಿಂದ ೫ ಅಗಸ್ಟ್ ೨೦೧೮ ರ ವರೆಗೆ ನನ್ನ ಗಂಡ ಮಹಾಬಲೇಶ್ವರ ಪನೆಯಾಲ ಮತ್ತು ನಾನು ಅಮೃತ ಸರ, ಹರಿದ್ವಾರ, ಹೃಷಿಕೇಶ, ಚಂಡೀ ಘಡ ಹಾಗೂ ಶಿಮ್ಲಾಕ್ಕೆ ಪ್ರವಾಸ ಹೋಗಿ ಬಂದೆವು. ನಾವು ನೋಡಿದ ಸ್ಥಳಗಳು, ಅಲ್ಲಿನ ವಿಶೇಷತೆಗಳು,  ದಾರಿ ಮಧ್ಯೆ ನಮಗಾದ ಅನುಭವಗಳು ಹಾಗೂ ಇನ್ನಿತರ ವಿಚಾರಗಳ ಕುರಿತಂತೆ ಪುಟ್ಟದೊಂದು ಪ್ರವಾಸ ಕಥನವನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ. ಓದಿ ಪ್ರೋತ್ಸಾಹಿಸಿ, ಅಭಿಪ್ರಾಯ ತಿಳಿಸಿ.....      ಆ ದಿನಗಳಲ್ಲಿ ಕೇವಲ ಭೂಪಟವನ್ನು ನೋಡುತ್ತಾ ಕೂತಲ್ಲೇ ಬಹಳಷ್ಟು ಪ್ರದೇಶಗಳನ್ನು ಸುತ್ತುತ್ತಿದ್ದೆ. ಅದೊಂದು ಹಳೇ ಬ್ರಿಜಬಾಸಿ ಅಟ್ಲಾಸ್. ಪ್ರೈಮರಿಯಲ್ಲಿ ಗಿರಿಜಾ ಟೀಚರ್ ಸಮಾಜ ವಿಜ್ಞಾನ ಪಾಠ ಮಾಡುವಾಗ ಅಟ್ಲಾಸ್‌ನ್ನು ತರಗತಿಗೆ ಒಯ್ಯಬೇಕಿತ್ತು.  ಟೀಚರ್ ಪಾಠ ಮಾಡುತ್ತಾ ಕೆಲವೊಂದು ಸ್ಥಳಗಳನ್ನು ಅಟ್ಲಾಸ್‍ನಲ್ಲಿ ಗುರುತಿಸಲು ಹೇಳುತ್ತಿದ್ದರು. ಇತಿಹಾಸಕ್ಕೆ ಬಂದರೆ, ಹಲವು ರಾಜ ವಂಶಸ್ಥರ ರಾಜಧಾನಿಗಳು, ಅವರು ಧಾಳಿ ಮಾಡಿದ ಪ್ರದೇಶಗಳು, ಅವರ ಸಾಮ್ರಾಜ್ಯ ವಿಸ್ತರಣೆ ಮುಂತಾದ ಜಾಗಗಳನ್ನು ಗುರುತಿಸಲಾಗುತ್ತಿತ್ತು. ಭೂಗೋಳ ಶಾಸ್ತ್ರಕ್ಕೆ ಬಂದರೆ, ಹಿಮಾಲಯದ ಪರ್ವತಗಳು, ಥಾರ್ ಮರುಭೂಮಿ, ದಖ್ಖನ್ ಪ್ರಸ್ಥ ಭೂಮಿ, ಉತ್ತರದ ವಿಶಾಲ ಮೈದಾನಗಳು, ಗಂಗಾ ಯಮುನಾ ನದಿಗಳು, ಉಪನದಿಗಳು, ಸೂಚಿ ಪರ್ಣ ಕಾಡುಗಳು ಹೀಗೆ ಹತ್ತು ಹಲವು ಭೂಭಾಗಗಳನ್ನು ಗುರುತಿಸುತ್ತಿದೆವು. ಆಗೆಲ್ಲಾ ಆ ಜಾಗಗಳ ಬಗ್ಗೆ ಕುತೂಹಲ, ಅಲ