ಮಾನ್ಸೂನ್ ಟ್ರಿಪ್ ೨೦೧೮ - 5
ಸ್ವರ್ಣ ಮಂದಿರ. ಪವಿತ್ರ ಸ್ವರ್ಣ ಮಂದಿರ upper view ಜ ಲಿಯನ್ ವಾಲಾಭಾಗ್‍ನ ಪಕ್ಕದಲ್ಲೇ ಸಿಖ್‌ರ ಪವಿತ್ರ ದೇವಾಲಯವಾದ ಸ್ವರ್ಣ ಮಂದಿರವಿದೆ. ಇದನ್ನು 'ಶ್ರೀ ಹರ್ ಮಂದಿರ್ ಸಾಹೀಬ್' ಎಂದೂ ಕರೆಯುವರು. ಪ್ರತಿದಿನ ಇಲ್ಲಿಗೆ ಸಾವಿರಾರು ಮಂದಿ ಭಕ್ತರು ಆಗಮಿಸುವರು, ಹೊರಗಡೆ ಚಪ್ಪಲ್ ಸ್ಟ್ಯಾಂಡ್‌ನಲ್ಲಿ ತುಂಬಾ ರಶ್ ಇತ್ತು. ಸುಮಾರು ೬ ರಿಂದ ೭ ದೊಡ್ಡ ದೊಡ್ಡ ಕೌಂಟರ್‌ಗಳು ಚಪ್ಪಲ್‌ಗಳನ್ನು ಸಂಗ್ರಹಿಸುವುದಕ್ಕಾಗಿ ಇದ್ದವು. ಸಿಖ್ಖರು ಪರೋಪಕಾರದಲ್ಲಿ ಹಾಗೂ ಸೇವೆ ಮಾಡುವುದರಲ್ಲಿ ಎತ್ತಿದ ಕೈ. ಆಗ್ರಾದಲ್ಲಿ ಒಂದು ಗುರುದ್ವಾರವಿದೆ (ಗುರು ಕಾ ತಾಲ್). ಬಿಡುವಿರುವಾಗ ನಾವು ಈ ಗುರುದ್ವಾರಕ್ಕೆ ಹೋಗುವುದಿದೆ. ದಕ್ಷಿಣ ಕನ್ನಡದಲ್ಲಿ ಹೇಗೆ ಹೆಚ್ಚಿನ ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಇರುತ್ತದೋ ಹಾಗೆ ಇಲ್ಲೆಲ್ಲಾ ಗುರುದ್ವಾರಗಳಲ್ಲಿ ಭೋಜನದ ವ್ಯವಸ್ಥೆ ಇರುತ್ತದೆ. ಮಹಿ ಯಾವಗಲೂ ಒಂದು ಮಾತು ಹೇಳುವುದಿದೆ, ''ಉತ್ತರ ಭಾರತದಲ್ಲಿ ಎಲ್ಲಾದರೂ ಬಂದು ಸಿಕ್ಕಿ ಹಾಕಿಕೊಂಡರೆ ಮೊದಲು ಗುರುದ್ವಾರಗಳೆಲ್ಲಿವೆ? ಅಂತ ಹುಡುಕಬೇಕಂತೆ, ಅಲ್ಲಿ ಖಂಡಿತಾ ನಮಗೆ ಬೇಕಾದ ಸಹಾಯ ಸಿಗಬಹುದು'' ಎಂದು. ಸಿಖ್ ಧರ್ಮ ಸ್ಥಾಪನೆಯ ಮುಖ್ಯ ಉದ್ದೇಶವೇ ಅದಾಗಿತ್ತು, ಸಮಾಜಕ್ಕೆ ನಿಸ್ವಾರ್ಥವಾದ ಸೇವೆಯನ್ನು ಕೊಡುವುದು ಹಾಗೂ ರಕ್ಷಿಸುವುದು. ನಾವು ಆಗ್ರಾದಲ್ಲಿ 'ಗುರು ಕಾ ತಾಲ್'ಗೆ ಹೋಗಿದ್ದಾಗ ನೋಡಿದ್ದೆವು, ಅದೆಷ್ಟೋ...