Posts

Showing posts from February, 2018

ದನಿ ಇರದ ಬಾಳಿನಲ್ಲಿ....

Image
    ಅವನೊಬ್ಬ ದೊಡ್ಡ ಹಾಡುಗಾರ. ೨೫ನೇ ವಯಸ್ಸಿಗಾಗಲೇ ಸಂಗೀತ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿದ್ದ. ಶಾಸ್ತ್ರೀಯ ಸಂಗೀತವಿರಲಿ ಪಾಪ್ ಗಾಯನವಿರಲಿ ಬಹಳ ಸೊಗಸಾಗಿ ಹಾಡುತ್ತಿದ್ದ. ದೇಶ ವಿದೇಶಗಳಲ್ಲಿಯೂ ಅವನ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು. ಜೊತೆಗೆ ಅವನು ಸಂಗೀತ ಸಂಯೋಜಿಸಿದ ಅದೆಷ್ಟೋ ಹಾಡುಗಳು ಲಕ್ಷ ಲಕ್ಷ ಜನರ ಮನಸ್ಸನ್ನು ಸೆಳೆದಿತ್ತು.     ಒಂದು ದಿನ ಸರಕಾರದ ಜಾಹಿರಾತೊಂದರ ಶೂಟಿಂಗ್‌ಗಾಗಿ ಹಳ್ಳಿಯೊಂದಕ್ಕೆ ಹೋದ. ಹೆಚ್ಚಿನವರು ಅನಕ್ಷರಸ್ಥರಾಗಿದ್ದ ಊರದು. ಜನರ ಜೀವನ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ.  ತೆಂಗಿನ ತಟ್ಟಿಯನ್ನು ಹಣೆದೋ, ಮುಳಿ ಹುಲ್ಲನ್ನು ಬಳಸಿಕೊಂಡೋ ಜೋಪಡಿಯನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವನಿಗೆ ಉಳಿದುಕೊಳ್ಳಲು ಗ್ರಾಮ ಪಂಚಾಯತ್ ಕಟ್ಟಡವೊಂದನ್ನು ನೀಡಲಾಗಿತ್ತು. ಅಲ್ಲಿ ತಕ್ಕ ಮಟ್ಟಿಗೆ ಎಲ್ಲಾ ಸೌಕರ್ಯಗಳೂ ಸಮರ್ಪಕವಾಗಿತ್ತು. ಕಟ್ಟಡದ ಹಿಂದೆ ಕೆಲವು ಜೋಪಡಿಗಳಿದ್ದವು.    ಹಗಲಿಡೀ ಪ್ರಯಾಣ ಮಾಡಿ ಸುಸ್ತಾಗಿದ್ದ ಆತನಿಗೆ ಬೆಳ್ಳಗಾದದ್ದೇ ತಿಳಿಯಲಿಲ್ಲ. ತದರಿ ನಾ....  ನಾ..... ನ್ನಾ  ಆಆ...... ಎಂದು ಹಿಂದೋಳ ರಾಗ(ಬಡಾ ಖೇಲ್) ಆಲಾಪಾನೆ ಕೇಳುತ್ತದೆ, ನಿದ್ದೆ ಮಂಪರಿನಲ್ಲಿ ಯಾರೋ ಕಾಲ್ ಮಾಡಿದ್ದಾರೆ, ಅಥವಾ ಅಲರಾಂ ಬಡಿದುಕೊಳ್ಳುತ್ತಿದೆ ಅಂದುಕೊಂಡ. ಎಚ್ಚರವಾಗಿ ನೋಡುತ್ತಾನೆ, ಅರೆ!! ನೆಟ್ ವರ್ಕೇ ಇಲ್ಲ. ಅಲರಾಂ ಕೂಡಾ ಸೆಟ್ ಮಾಡಿಟ್ಟಿಲ್ಲ.  ಬಹಳ ಹತ್ತಿರದಿಂದ ಹಾಡು ಕೇಳಿದಂತಾಗುತ್ತಿತ್ತು. ಹಿಂದಿ

ಹಾಳು ಹರಟೆ!!!

Image
    ಬೇಡವೆಂದು ಎಸೆದ ಹಾಳೆ.....(ಇದನ್ನು ಪಬ್ಲಿಷ್ ಮಾಡುದಾ, ಬೇಡ್ವಾ ಅಂತ ಯೋಚಿಸುತ್ತಿರುವಾಗಲೇ ಗೋಡೆಯ ಬಲ ತುದಿಯಲ್ಲಿ  publish ಅಂತಿರುವ ಕೇಸರಿ ಬಟನ್ ಪ್ರೆಸ್ ಆಗಿ ಹೋಗಿತ್ತು, ಕ್ಷಮೆ  ಇರಲಿ)  🙏         ಇದೆಂಥಾ ಒಳ್ಳೆ ಡೈರಿ ತರ ಇದೆಯಲ್ಲಾ ಅಂತ ನಿಮಗನ್ನಿಸಿದರೆ ಅದು ನಿಮ್ಮ ತಪ್ಪಲ್ಲ, ಹಾಗಂತ ನನ್ನ ತಪ್ಪು ಅಂತ ಒಪ್ಪಿಕೊಳ್ಳಿಕ್ಕೆ ನಾನ್ ತಯಾರಿಲ್ಲ. ಯಾರೂ ಓದ್ಬಾರ್ದು ಅಂತ ಹೇಳಿಕೊಳ್ಳಿಕಾಗದೇ ಇರೋದನ್ನ ಡೈರಿಯಲ್ಲಿ ಬರೀತೇವೆ. ಇಲ್ಲಿ ಬರ್ದ್ರೂ ಅಷ್ಟೆ ಯಾರೂ ಓದ್ಲಿಕಿಲ್ಲ ಅಂದುಕೊಂಡೇ ಬರೆಯ ಹೊರಟೆ. (ಮನದ ಮೂಲೆಯಲ್ಲೆಲ್ಲೋ ಒಂದು ಸ್ವಾರ್ಥ ಇದೆ ಆದ್ರೂ ಯಾರಾದ್ರು ಓದ್ಬೋದು, ಸ್ವಲ್ಪ ದೊಡ್ದ ಜನ ಆಗುವ ಅಂತ!!)    ಹೆಚ್ಚೇನಲ್ಲ, ಎರಡು ಮೂರು ವರ್ಷಗಳ ಹಿಂದಿನ ಮಾತು. ನನ್ನಲ್ಲಿ ಸ್ಮಾರ್ಟ್ ಫೋನ್ ಇರ್ಲಿಲ್ಲ.  ಅದಾಗಲೇ ನನ್ನ ಹತ್ತಿರದ ಬಂಧುಗಳಲ್ಲಿ, ಸ್ನೇಹಿತರಲ್ಲಿ ಎಲ್ಲರಲ್ಲೂ ಉಜ್ಜುವ ಮೊಬೈಲ್ ಇತ್ತು. ನನಗೂ ಬಹಳ ಆಸೆ ಇತ್ತು. ಟಚ್ ಸ್ಕ್ರೀನ್ ಬೇಕು ಅಂತ. ಆದರೆ ಆ ತುಡಿತ ತೀವ್ರ ಇರ್ಲಿಲ್ಲ. ಕಾರಣ ಸಿಂಪಲ್. ನನಗೆ ಗೊತ್ತಿತ್ತು ನಂಗೆ ತಗೊಳ್ಳಿಕೆ ಆಗುದಿಲ್ಲ ಅಂತ, ಪರಿಸ್ಥಿತಿ ಚನ್ನಾಗಿರ್ಲಿಲ್ಲ. ಜೀವನವನ್ನು ವೃತದಂತೆ ಪಾಲಿಸ್ತಿದ್ದೆ. ನಿಜಾ ಎರಡು ಸಾಲುಗಳಲ್ಲಿ ನಿಮ್ಗದು ಅರ್ಥ ಆಗ್ಲಿಕ್ಕೆ ಖಂಡಿತಾ ಸಾಧ್ಯ ಇಲ್ಲ. ಬಿಡಿ... ಆದರೆ ನಾನು ಒಂದನ್ನಂತು ಒಪ್ಪಿಕೊಳ್ತೇನೆ, ''ಪಾಸಿಟಿವ್ ಆಗಿ ಯೋಚಿಸ್ತಾ ಇದ್ರೆ ಪಾಸ

ತಂಪಿನಂಗಳ....

Image
     ಬಿಸಿಲಿನಿಂದಾಗಿ ಭೂಮಿಯು ಸುಡದೇ ಹೋದರೆ ಮಳೆ ಬಂದಾಗ ಮಣ್ಣಿನ ವಾಸನೆ ಹೊರಸೂಸಲು ಸಾಧ್ಯವೇ? ಅದೇ ರೀತಿ ಜೋರಾಗಿ ಮಳೆ ಬರದಿದ್ದರೆ, ಮಳೆ ಬಂದು ನಿಂತಾಗ ಉಂಟಾಗುವ ನೀರವತೆಯ ಮೌನವ ಸವಿಯಲು ಸಾಧ್ಯವೇ? ಮೌನದ ಮಹಿಮೆಯ ಘೋರತೆ ಅರ್ಥವಾಗದೇ ಇದ್ದರೆ ಮಾತಿನ ಪ್ರಾಮುಖ್ಯತೆ ಅರಿವಾಗುವುದೇ? ಮಾತುಗಳಿಂದ  ನೋವಾಗದೇ ಇದ್ದರೆ ಮಾತುಗಳಿಗಾಗಿ ತವಕಿಸಲು ಸಾಧ್ಯವೇ? ಈ ಬದುಕೇ ಹಾಗೆ ಇಲ್ಲಿ ಎಲ್ಲವೂ ಬೇಕು, ಬೇಕಾದರೂ ಬೇಡ. ಯಾವುದನ್ನೂ ತೀರ್ಮಾನಿಸಲು ಸಾಧ್ಯವಿಲ್ಲ, ಬದಲಾಗುತ್ತಾ ಇರುತ್ತದೆ, ಬದಲಾಗುತ್ತಲೇ ಇರುತ್ತದೆ. ಇಲ್ಲಿ ಯಾರೂ ಕೆಟ್ಟವರಲ್ಲ. ಕೆಟ್ಟವರಾಗಿದ್ದರೆ ಅವರು ಕೆಟ್ಟ ಕೆಲಸಗಳನ್ನು ಮಡುತ್ತಲೇ ಇರುತ್ತಿರಲಿಲ್ಲ. ಎಲ್ಲವೂ ನಿರ್ಮಲ, ಎಲ್ಲವೂ ಸೌಮ್ಯ, ಎಲ್ಲವೂ ಶಾಂತ. ಕೂಲ್ ಆಗಿ ಕಣ್ತೆರೆದು ಬದುಕನ್ನು ನೋಡಿ....                                                                                                                                               -ಪ್ರಗಲ್ಭಾ

ವಿತ್ ಸೋ ಮಚ್ ಆಫ್ ಕನ್ಫ್ಯೂಷನ್.......!!!

Image
'' ಎಂಥಾ ಹುಡುಗಿಯರಪ್ಪ ಈಗಿನ ಕಾಲದವು ಹಣೆಗೆ ಬೊಟ್ಟು ಇಡುದಿಲ್ಲಾ, ಕೈಗೆ ಬಳೆ ಹಾಕುದಿಲ್ಲ, ತಲೆಯಲ್ಲೊಂದು ಹೂವಿಲ್ಲ, ಕಾಲಿಗೆ ಗೆಜ್ಜೆ ಇಲ್ಲ.'' ರಾಧಕ್ಕ ಹೂವಿನ ಮನೆ ಪೋಜೆಯಲ್ಲಿ ವಾಸಂತಿಯಕ್ಕನ ಜೊತೆ ತನ್ನ ಸೊಸೆಯನ್ನ ದೂರ್ತಿದ್ರು... ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸುದೇಷ್ಣೆ '' ಹಾಕದಿದ್ರೆ ಎಂಥಾ ಪ್ರೋಬ್ಲೆಮ್ ನಿಮ್ಗೆ, ನೀವ್ ಹಾಕ್ತೀರಲ್ಲ?'' ಅಂದ್ಳು... ''ನೋಡು ಈ ಹುಡುಗಿ ಬೊಟ್ಟು ಹಾಕಿದಾಳೆ ಆದ್ರೆ ಅದು ಕಣ್ಣಿಗೆ ಕಾಣುದಿಲ್ಲ, ಅದೆಷ್ಟು ಚಿಕ್ಕಕೆ ಹಾಕಿದಾಳೆ'' '' ಸರಿ ನೆಕ್ಸ್ಟ್ ಟೈಮ್ ಎಲ್ಲಿಗ್  ಹೋಗ್ತಿದ್ರೂ ಭೂತ ಕನ್ನಡಿ ಹಿಡ್ಕೊಂಡು ಹೋಗಿ. ಯಾರದ್ರು ನಮ್ಮಂತ ಹುಡುಗಿಯರು ಬಂದ್ರೆ ಅವ್ರು ಬೊಟ್ಟು  ಹಾಕಿದಾರಾ ಇಲ್ವಾ ಅಂತ ಚಕ್ ಮಾಡ್ಲಿಕ್ಕೆ ಬೇಕಾಗ್ಬೋದು.''  ಪ್ರಿಯಾ ಇನ್ನೂ ಚಿಕ್ಕಕೆ ಬೊಟ್ಟಿಟ್ಟಿದ್ಳು. ''ನೋಡಿ ಮಕ್ಳೇ ನಾವು ನಿಮ್ಮ ಒಳ್ಳೇದಕ್ಕೇ ಹೇಳುದು. ಮತ್ತೆ ಹೊರಗಿನವ್ರು ಯಾರದ್ರೂ ಎಂತಾದ್ರು ಹೇಳ್ಬಾರ್ದು, ಈ ಹುಡುಗೀರ್ಗೆ ಸಂಸ್ಕಾರ ಇಲ್ಲ, ಸಂಪ್ರದಾಯ ಗೊತ್ತಿಲ್ಲ ಅಂತ ಅದ್ಕೆ ಹೇಳಿದ್ದು'' '' ನೀವು ಬೇರೆಯವ್ರ ಮಕ್ಳ ಬಗ್ಗೆ ಆ ತರ ಅಂದುಕೊಳ್ಳದಿದ್ರೆ ನಿಮ್ಗೂ ಆ ರೀತಿಯ ಯೋಚನೆ ಬರ್ಲಿಕ್ಕಿಲ್ಲ, ಹೊರಗಿನವ್ರು ಅಂದುಕೊಂಡ್ರೆ ನಿಮ್ಗೆಂತ? ನಿಮ್ಗೆ ಹೊರಗಿನವ್ರಿಗೆ ಸರಿ ಅಂತ ಅನಿಸಿಕೊಳ್ಳೋದು ಮುಖ್ಯವಾ?

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ

Image
ಅ-ಬಲೆ    ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ.....             ಪಶ್ಚಿಮ ಘಟ್ಟದ ತಪ್ಪಲಲ್ಲಿರುವುದು ನಮ್ಮೂರು. ಅದೆಷ್ಟೋ ಬೆಟ್ಟ, ಗುಡ್ಡಗಳ ತವರು. ಬೆಳ್ಳಂ ಬೆಳ್ಳಗ್ಗೆ ಎದ್ದು ಸುತ್ತಾಡುವಾಗ ನಾನು ಸ್ವರ್ಗದಲ್ಲಿರುವೆನೇನೋ ಎಂಬ ಭಾವ. ಜೇಡರು ರಾತ್ರಿ ಪೂರ್ತಿ ಹುಲ್ಲು ಹಾಸಿನಲ್ಲಿ, ಪೊದರು ಗಂಟಿಗಳಲ್ಲಿ ಹಣೆಯುತ್ತಿದ್ದ ಬಲೆಯ ಮೇಲೆ ಕುಳಿತ ಮಂಜಿನ ಹನಿಗಳು ಹೆಜ್ಜೆ ಹೆಜ್ಜೆಗೂ ಬಿಳಿ ಚಿತ್ತಾರವನ್ನು ಮೂಡಿಸುತ್ತಿದ್ದವು. ಹಸುರು ಮತ್ತು ಬಿಳಿಯ ಈ ಸುಂದರ ಚಿತ್ರ ಬೆಳಗಿನ ಜಾವವೇ ಮನಸ್ಸಿಗೆ ಉತ್ಸಾಹ ತುಂಬುತ್ತಿತ್ತು.  ಜೊತೆಗೆ ಬೀಸುವ ತಂಪು ಗಾಳಿ ಹಾಗೂ ಮಬ್ಬು ಮಬ್ಬಾದ ಹಿಮ....          ಇಂತಹುದ್ದೇ ಒಂದು ಸುಂದರವಾದ ತಾಜಾ ಹಾಗೂ ತಂಪಿನ ಭಾವನೆಯನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಅಕ್ಷರಗಳ ಮೂಲಕ ಈ ಬಲೆಯನ್ನು ಹಣೆಯಲಾಗಿದೆ. ಬಿಸಿಲೇರುತ್ತಾ ಬಲೆಯ ಮೇಲಿರುವ ಮಂಜಿನ ಹನಿ ಕರಗಿ ಬಲೆ ಇದೆಯೋ ಇಲ್ಲವೋ ಎಂದು ತಿಳಿಯದಾಗುತ್ತದೆ, ಇಲ್ಲಿಎಲ್ಲವೂ ಕ್ಷಣಿಕ ಎಂಬ ತತ್ತ್ವವಿದೆ. ಯಾವನೋ ಆಗಂತುಕ ಸುಂದರವಾದ ಬಿಳುಪಿನ ಬಲೆಯನ್ನು ನೋಡಿ ವಿಕೃತ ಸಂತೋಷಕ್ಕಾಗಿ ಆ ಬಲೆಗೆ ತುಳಿದು ನಾಶ ಪಡಿಸುತ್ತಾನೆ. ಆ ವೇದನೆಯ ಕಥೆಯಿದೆ. ಅಸಹಾಯಕ ಜೇಡವು ನಾಶವಾದ ತನ್ನ ಬಲೆಯ ಬಗ್ಗೆ ರೋಧಿಸುತ್ತಾ ಹಾಡುವ ಷಾಯಿರಿ ಇದೆ. ಮತ್ತೆ ಬಲೆ ಹಣೆಯಲು ತೊಡಗುವ ಜೇಡನ ಆಶಾವಾದದ ಬದುಕು ಇದೆ, ಗಟ್ಟಿ ನಿರ್ಧಾರವಿದೆ. ಸಮಸ್ಯೆಗಳನ್ನು ದಿಟ್ಟ ತನದಿ ಎದುರಿಸಿ ಎದುರಾಳಿಗೆ ಏ