ತಂಪಿನಂಗಳ....
ಬಿಸಿಲಿನಿಂದಾಗಿ ಭೂಮಿಯು ಸುಡದೇ ಹೋದರೆ ಮಳೆ ಬಂದಾಗ ಮಣ್ಣಿನ ವಾಸನೆ ಹೊರಸೂಸಲು ಸಾಧ್ಯವೇ? ಅದೇ ರೀತಿ ಜೋರಾಗಿ ಮಳೆ ಬರದಿದ್ದರೆ, ಮಳೆ ಬಂದು ನಿಂತಾಗ ಉಂಟಾಗುವ ನೀರವತೆಯ ಮೌನವ ಸವಿಯಲು ಸಾಧ್ಯವೇ? ಮೌನದ ಮಹಿಮೆಯ ಘೋರತೆ ಅರ್ಥವಾಗದೇ ಇದ್ದರೆ ಮಾತಿನ ಪ್ರಾಮುಖ್ಯತೆ ಅರಿವಾಗುವುದೇ? ಮಾತುಗಳಿಂದ ನೋವಾಗದೇ ಇದ್ದರೆ ಮಾತುಗಳಿಗಾಗಿ ತವಕಿಸಲು ಸಾಧ್ಯವೇ? ಈ ಬದುಕೇ ಹಾಗೆ ಇಲ್ಲಿ ಎಲ್ಲವೂ ಬೇಕು, ಬೇಕಾದರೂ ಬೇಡ. ಯಾವುದನ್ನೂ ತೀರ್ಮಾನಿಸಲು ಸಾಧ್ಯವಿಲ್ಲ, ಬದಲಾಗುತ್ತಾ ಇರುತ್ತದೆ, ಬದಲಾಗುತ್ತಲೇ ಇರುತ್ತದೆ. ಇಲ್ಲಿ ಯಾರೂ ಕೆಟ್ಟವರಲ್ಲ. ಕೆಟ್ಟವರಾಗಿದ್ದರೆ ಅವರು ಕೆಟ್ಟ ಕೆಲಸಗಳನ್ನು ಮಡುತ್ತಲೇ ಇರುತ್ತಿರಲಿಲ್ಲ. ಎಲ್ಲವೂ ನಿರ್ಮಲ, ಎಲ್ಲವೂ ಸೌಮ್ಯ, ಎಲ್ಲವೂ ಶಾಂತ. ಕೂಲ್ ಆಗಿ ಕಣ್ತೆರೆದು ಬದುಕನ್ನು ನೋಡಿ....
-ಪ್ರಗಲ್ಭಾ
Comments
Post a Comment
thank you...