Posts

Showing posts from October, 2024

ಗರುಡ ಹಾರಿದ ಹಾದಿ: ಭಾಗ - 2

Image
  ವೃತ್ತಿ ಜೀವನ ಆರಂಭ     ೨೦೦೬ ಸೆಪ್ಟೆಂಬರ್ ೨೪ರಂದು ಕೆಂಚಪ್ಪನವರು ಊರು ಬಿಟ್ಟು ಬೆಂಗಳೂರಿಗೆ ಹೊರಡುತ್ತಾರೆ. ಬೆಂಗಳೂರಿಗೆ ಹೋಗಲು   ಪಕ್ಕದೂರು ಶಿವಪೂರ್ (ಹಳ್ಳೂರ್) ನವರಾದ, ಸಹಪಾಟಿಯ ತಂದೆ ಸಹಾಯಮಾಡುತ್ತಾರೆ. ಬೆಂಗಳೂರಲ್ಲಿ ಶಿವಾಜಿನಗರದಲ್ಲಿ ಒಂದು ಹೋಟೆಲ್ ರೂಮ್ ಬುಕ್ ಮಾಡಿ ಅಲ್ಲಿ ಉಳಿದುಕೊಂಡರು. ಮರುದಿನ ಏರ್‌ಮೆನ್ ಸೆಲೆಕ್ಷನ್ ಸೆಂಟರ್‌ಗೆ ಹೋಗುತ್ತಾರೆ. ಅಲ್ಲಿಗೆ, ಆಯ್ಕೆ ಆದ ಎಲ್ಲರೂ ಬಂದಿದ್ದರು. ಅಲ್ಲಿ ಇವರ ಎಲ್ಲಾ ಡಿಟೇಲ್ಸ್‌ಗಳನ್ನು ಪರೀಕ್ಷಿಸಿ ಡಾಕ್ಯುಮೆಂಟ್‌ಗಳನ್ನು ತಯಾರು ಮಾಡುತ್ತಾರೆ. ಕೊನೆಗೆ ಜಿ ಟಿ ಐ, ಐ ಎಫ್ ಎಸ್, ಐ ಎ ಎಫ್ ಜಿ ಗಳಿಗೆ ದೆಹಲಿಯಿಂದ ವೇಕೆನ್ಸಿ ಬರಲಿಲ್ಲ, ಹಾಗಾಗಿ ಈಗ ನಿಮ್ಮ ಊರಿಗೆ ಹೋಗಿ ಮತ್ತೆ ಲೆಟರ್ ಕಳುಹಿಸುತ್ತೇವೆ ಆಗ ಬನ್ನಿ ಎನ್ನುತ್ತಾರೆ. ಊರಲ್ಲಿ ಎಲ್ಲರಿಗೂ ಟಾ ಟಾ ಬಾಯ್ ಹೇಳಿ ಬಂದಿದ್ದವರು ಮತ್ತೆ ಊರಿಗೆ ಹೋಗಿ ಏನೆಂದು ಹೇಳುವುದು, ಪುನಃ ಕಾಲ್ ಲೆಟರ್ ಬರಲಿಲ್ಲವಾದರೆ ಎಂದು ಈ ಗ್ರೂಪ್‌ಗಳಿಗೆ ಆಯ್ಕೆ ಆದ ಹುಡುಗರಿಗೆ ಆತಂಕ. ಕೊನೆಯ ದಿನ ಕೊನೆಯ ಸಮಯಕ್ಕೆ ಮತ್ತೆ ಇವರನ್ನು ಕರೆದು ನಾಲ್ಕು ವೇಕೆನ್ಸಿ ಬಂದಿದೆ ಬೇಗ ಆಫೀಸ್‌ಗೆ ಬನ್ನಿ ಎನ್ನುತ್ತಾರೆ. ಈ ಮೂರು ಗ್ರೂಪ್‌ಗಳಿಗೆ ಸೆಲೆಕ್ಟ್ ಆಗಿ ಬಂದಿದ್ದ ಐದು ಜನರಲ್ಲಿ ನಾಲ್ಕು ಜನರನ್ನು ಸೇರಿಸಿಕೊಳ್ಳುತ್ತಾರೆ, ಅವರಲ್ಲಿ ಕೆಂಚಪ್ಪನವರೂ ಒಬ್ಬರು.    ಅದೇ ದಿನ ರಾತ್ರಿ ರಾಣಿ ಚೆನ್ನಮ್ಮ ಟ್ರೈನ್...

ಗರುಡ ಹಾರಿದ ಹಾದಿ :ಭಾಗ-1

      ಇಲ್ಲಿ ಹೇಳಲು ಹೊರಟಿರುವ ಕಥೆ ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಬೆಳೆದ ಒಬ್ಬ ಸಾಧಕನದ್ದು. 'ಸಾಧಕ' ಅಂದಾಕ್ಷಣ, ಸಿನಿಮಾ, ಕ್ರಿಕೆಟ್ ತಾರೆಯರ ಬಗೆಗೋ ಅಥವಾ ಯಾರಾದರೂ ಬಿಸ್ನೆಸ್ ಮ್ಯಾನ್‌ಗಳ ಹೆಸರೋ, ರಾಜಕಾರಣಿಗಳ ಹೆಸರೋ ತಕ್ಷಣಕ್ಕೆ ನೆನಪಾಗುವುದು ಸಹಜ, ಆದರೆ ಇಲ್ಲಿರುವುದು "ಸೆಲೆಬ್ರೆಟಿ" ಅಂತ ಹಣೆಪಟ್ಟಿ ಕಟ್ಟಿಕೊಳ್ಳದ ಒಬ್ಬ ಸಾಧಕನ ಕಥೆ. ಈಗಾಗಲೇ 'ಅಸಾಮಾನ್ಯ' ಅಂತ ಹೇಳಿದೆ, ಸ್ಪೈಡರ್‌ಮ್ಯಾನ್, ಸೂಪರ್‌ಮ್ಯಾನ್ ಗಳ ಕಥೆಯನ್ನು ನೋಡುವಾಗ ಅಸಾಮಾನ್ಯ ಎಂದು ಅನಿಸುತ್ತದೆ, ಅಥವಾ ಇನ್ನಿತರ ಆಕ್ಷನ್ ಸಿನಿಮಾಗಳನ್ನು ನೋಡುವಾಗ ನಮಗೆ ಅವರೆಲ್ಲಾ ಅಸಾಮಾನ್ಯರು ಅಂತನ್ನಿಸುವುದು ಸತ್ಯ.   ಅದೇ ರೀತಿ, ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಾ, ತನ್ನ ರೆಕ್ಕೆಗಳನ್ನು ಇನ್ನಿಲ್ಲದ ವೇಗಗಳಲ್ಲಿ ತಿರುಗಿಸುತ್ತಾ, ಭೂಮಿಯಿಂದ ಒಂದಷ್ಟು ಅಡಿ ಎತ್ತರದಲ್ಲಿ ನಿಂತಿರುವ ಹೆಲಿಕಾಪ್ಟರಿನಿಂದ ಇಳಿಯಬಿಟ್ಟ ರೋಪ್‌ನಲ್ಲಿ   ಕೆಳಗಿಳಿಯುವುದು, ಯಾವ್ಯಾವುದೋ ಗುರುತು ಪರಿಚಯ ಇಲ್ಲದ, ಹೆಸರಿಲ್ಲದ ಪರ್ವತಗಳನ್ನು ಹತ್ತುವುದು, ಅದೂ ಕೂಡ ಬೆನ್ನ ಮೇಲೆ ಕಿಲೋ ಗಟ್ಟಲೆ ಭಾರದ ಬ್ಯಾಗ್‌ಗಳನ್ನು ಹೇರಿಕೊಂಡು! ಗೋಡೆಗಳ ಮೇಲೆ ಜೇಡನಂತೆ ಹತ್ತುವುದು, ಮೈ ಕೈಗಳಲ್ಲಿ ರಕ್ತ ಸುರಿದರೂ ಅಯ್ಯೋ ಅಮ್ಮಾ ಅನ್ನದೆ ಮತ್ತೆ ಎದ್ದು ನಿಲ್ಲುವುದು.... ಹೀಗೆ ಹತ್ತು ಹಲವು ಕಠಿಣ ಟಾಸ್ಕ್‌ಗಳೊಂದಿಗೆ ಬದುಕುವುದು ಕೂಡಾ ಸಾಮಾನ್ಯ ಸಂಗತಿಯಲ್ಲ. ಯಾವು...