Posts

ಮಾನ್ಸೂನ್ ಟ್ರಿಪ್ ೨೦೧೮ - 9

Image
೦೨/೦೮/೨೦೧೮  ಬೆಳಗ್ಗೆ ಸುಮಾರು ೭ ಗಂಟೆಯ ಸಮಯಕ್ಕೆ ಎಚ್ಚರವಾಯಿತು. ನಂತರ ಸ್ನಾನ ಮಾಡಿ ಫ್ರೆಶ್ ಆಗಿ ತಿಂಡಿ ತಿನ್ನಲು ಹೋಟೆಲ್ ಹುಡುಕುತ್ತಾ ಹೊರಟೆವು. ಅಲ್ಲೆಲ್ಲಾ ಹೋಟೆಲ್ ಬಾಗಿಲು ತೆರೆಯುವುದು ೧೦ ಗಂಟೆಯ ಮೇಲಂತೆ. ಮಹಿ ಮೊದಲೆಲ್ಲಾ ತಿಂಡಿ ತಿನ್ನಲು ಹೋಗುತ್ತಿದ್ದ ಹೋಟೆಲ್ ಒಂದಿದೆ, ಅಲ್ಲಿ ಪೂರಿ ಹಾಗೂ ಚೋಲೆ ಫೇಮಸ್, ರುಚಿಯಾಗಿರುತ್ತದೆ ಅಲ್ಲೇ ಹೋಗೋಣ ಎಂದು ನಡೆಯುತ್ತಾ ಸಾಗಿದೆವು, ಅಲ್ಲೊಂದು ಎಲೆಕ್ಟ್ರಿಕ್ ರಿಕ್ಷಾ ಇತ್ತು, ಅದಕ್ಕೆ ಹತ್ತಿದೆವು. ಮಾತನಾಡುತ್ತಾ ಆಟೋ ಡ್ರೈವರ್ ಏರ್ ಫೋರ್ಸ್‌ನಲ್ಲಿ ಸಿವಿಲಿಯನ್ ಎಂಪ್ಲಾಯಿ ಆಗಿ ಸದ್ಯ ರಿಟೈರ್ಡ್ ಆದವರು, ಎಂದರು, ಮಹಿಯೂ ಏರ್‌ಫೋರ್ಸ್‌ನಲ್ಲಿರುವುದು ತಿಳಿದು ಅವರಿಗೂ ಖುಷಿ ಆಯಿತು. 'ಕಲ್ಕಾ ಸ್ವೀಟ್ ಶಾಪ್' ಎಂಬ ಹೋಟೆಲ್ ಬಳಿ ಗಾಡಿ ನಿಲ್ಲಿಸಿದರು. ನಂತರ ಆ ಹೋಟೆಲ್‌ನಲ್ಲಿ ಪೂರಿ ತಿಂದೆವು. ಇನ್ನೂ ಸಮಯವಿತ್ತು, ನಮಗೆ ಚಂಡೀಘಡ್‌ಕ್ಕೆ ಹೋಗಲು ಟ್ರೈನ್ ಇದ್ದುದು ೧೦.೩೦ಕ್ಕೆ, ಆದ್ದರಿಂದ ಏರ್ ಫೋರ್ಸ್ ಸ್ಟೇಷನ್‌ನ ಹೊರಗಿನ ಆವರಣ ನೋಡಿಕೊಂಡು ಹೋಗುವುದು ಎಂದು ನಿರ್ಧರಿಸಿದೆವು. ತಿಂಡಿ ತಿಂದು ಬಂದ ಬಳಿಕವೂ ಆ ರಿಕ್ಷಾ ಅಲ್ಲೇ ನಿಂತಿತ್ತು. ಮತ್ತೆ ಅವರ ಬಳಿ ಹೋಗಿ ಅದೇ ಆಟೋದಲ್ಲಿ ಏರ್ಫೋರ್‍ಸ್ ಸ್ಟೇಷನ್ ನೋಡಲು ಹೊರಟೆವು. ಸ್ಟೇಷನ್‌ ಬಳಿ ತಲುಪುತ್ತಿದ್ದಂತೆಯೇ ಅಲ್ಲೊಂದು ದೊಡ್ಡ ಚರ್ಚ್ ಕಾಣಿಸಿತು. ೧೯೬೫ ಭಾರತ ಪಾಕಿಸ್ತಾನದ ಯುದ್ಧ ಸಂದರ್ಭದಲ್ಲಿ ಏರ್ ಫೋರ್ಸ್ ಸ್ಟೇಷನ್ ನ ಬಿಲ್ಡ...

ಮಾನ್ಸೂನ್ ಟ್ರಿಪ್ ೨೦೧೮ - 8

Image
ಹರಿದ್ವಾರ     ರೈಲಿನ ಕಿಟಕಿಯ ಮೂಲಕ ಹೊರಗಿನ ಸೌಂದರ್ಯವನ್ನು ನೋಡುತ್ತಾ ಕುಳಿತೆವು. ಚುಮು ಚುಮು ಚಳಿ ಬೇರೆ. ಅಂಬಾಲದ ನಂತರದ ಯಾವುದೋ ಒಂದು ಸ್ಟೇಷನ್‌ನಲ್ಲಿ ರೈಲು ನಿಂತಿತು. ಟೀ ಮಾರಿಕೊಂಡು ರೈಲಿನ ಸಿಬ್ಬಂದಿಗಳಾಗಲೀ, ಹೊರಗಿನವರಾಗಲೀ ಬರಲಿಲ್ಲ. ರೈಲ್ವೇ ಸ್ಟೇಷನ್‌ನ ಅಂಗಡಿಯೊಂದರಲ್ಲಿ  ಟೀ ಕುಡಿದೆವು. ಮತ್ತೆ ರೈಲು ಹೊರಟಿತು. ಕೇಸರಿ ಅಂಗಿ ಚಡ್ಡಿ ಹಾಕಿದ ನಾಲ್ಕೈದು ಜನ ಹುಡುಗರು ರೈಲಿಗೆ ಹತ್ತಿದರು, ರೈಲಿನಲ್ಲಿ ಗದ್ದಲ ಮಾಡುತ್ತಾ, ರೈಲು ಸಿಗ್ನಲ್ಲಿಗಾಗಿ ನಿಂತಲ್ಲೆಲ್ಲಾ ಇಳಿಯುತ್ತಾ, ರೈಲು ಹೊರಟಾಗ ಓಡಿ ಬಂದು ಹತ್ತುತ್ತಾ ತಮ್ಮದೇ ಲೋಕದಲ್ಲಿದ್ದರು. ಮಾತನಾಡಿಸಿದಾಗ ಅವರೂ ಹರಿದ್ವಾರಕ್ಕೆ ಹೋಗುವವರು, 'ಕಾವುಡ ಯಾತ್ರೆ' ಮಾಡಲು ಬಂದಿರುವುದಾಗಿ ಹೇಳಿದರು. ೮.೩೦ರ ಸುಮಾರಿಗೆ ರೈಲು ಹರಿದ್ವಾರದ ರೈಲ್ವೇ ಸ್ಟೇಷನ್ ತಲುಪಿತು. ಸಣ್ಣಗೆ ಚಳಿ, ಅಲ್ಪ ಸ್ವಲ್ಪ ಮಂಜು, ದೊಡ್ಡ ದೊಡ್ಡ ಮರಗಳು ಹಾಗೂ ಹಚ್ಚ ಹಸುರು. ಹೆಚ್ಚು ಮಾಲಿನ್ಯ ಇಲ್ಲದ ಪ್ರದೇಶ. ನಮ್ಮ ಪಶ್ಚಿಮ ಘಟ್ಟಗಳಂತೆಯೇ ಅಲ್ಲೂ ಹಸಿರನ್ನೂ ಪರ್ವತಗಳನ್ನೂ ಕಂಡು ಖುಷಿಯಾಯಿತು. ನಮ್ಮದೇ ಊರೇನೋ ಅನ್ನುವ ಭಾವನೆ ಬಂತು.  ನಾವು ರೂಮ್ ಬುಕ್ ಮಾಡಿದ್ದ ಹೋಟೆಲ್ ರೈಲ್ವೇ ಸ್ಟೇಷನ್‌ನ ಪಕ್ಕದಲ್ಲೇ ಇತ್ತು. ಹೋಟೆಲ್ ಒಂದಕ್ಕೆ ತಿಂಡಿ ತಿನ್ನಲು ಹೋದೆವು. ಆಲೂ ಪರೋಟ ಆರ್ಡರ್ ಮಾಡಿದೆವು.  ನನಗಂತು ಅನ್ನ ಮಜ್ಜಿಗೆ ಬಿಟ್ಟು ಬೇರೇನು ಉಣ್ಣಲೂ ಮನಸ್ಸಾಗಲಿಲ್ಲ. ನಿನ...