Posts

ಖುಷಿಗಾಗಿ ಬದುಕುವುದು ತಪ್ಪಲ್ಲ.....

Image
          ''ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ''    ಬಸವಣ್ಣನವರ ಈ ವಚನವನ್ನು ನಾನು ಆಗಾಗ ಜ್ಞಾಪಿಸಿಕೊಳ್ಳೋದಿದೆ. ಕೆಲವೊಂದ್ಸಲ ಅನ್ನಿಸುವುದು, ಛೆ, ನಾನು ಹಾಗ್ ಮಾಡಿದ್ದು ತಪ್ಪಾ, ನಾನು ಹೀಗ್ ಮಾಡ್ಬೇಕಿತ್ತಾ? ನಾನ್ ಹಾಗ್ ಹೇಳೋ ಬದಲು ಸುಮ್ನಿದ್ರೆ ಒಳ್ಳೇದಿತ್ತಾ? ಹೀಗೆ ಇನ್ನೊಂದಷ್ಟು. ನೀವೂ ಜೀವನದಲ್ಲಿ ಇಂತಹ ಸಿಚುವೇಷನ್‍ಗೆ ಅಗಾಗ ತುತ್ತಾಗ್ತಾ ಇರಬಹುದು. ನಾನ್ ಮಾಡಿದ್ದು ತಪ್ಪೇನೋ, ತಪ್ಪೇನೋ ಅನ್ನೋ ಪ್ರಶ್ನೆ ಕಾಡ್ತಾನೇ ಇರಬಹುದು. ಹಲವು ಸಲ ಹೇಗೆ ಬದುಕುವುದು ಸರಿ? ಹೇಗೆ ಇದ್ರೆ ಒಳ್ಳೆಯದು? ಒಳ್ಳೆವನಾಗ್ಲಿಕ್ಕೆ ಏನು ಮಾಡ್ಬೇಕು? ಹೀಗೆ ಗೊಂದಲದಲ್ಲಿಯೇ ಮುಳುಗಿರ್ತೇವೆ. ಛೇ ಅವ ನನ್ನ ಬೆಸ್ಟ್ ಫ್ರೆಂಡ್ ನನ್ನ ಮಾತಾಡಿಸ್ತಾನೇ ಇಲ್ಲ. ನನ್ನ ಮಾತಿಗೂ ರಿಪ್ಲೇ ಮಾಡ್ತಾ ಇಲ್ಲ. ನಾನೇನ್ ತಪ್ಪು ಮಾಡಿದೆ? ಆ ಆಂಟಿ ಒಬ್ರು ನಾನ್ ಹೀಗ್ ಮಾಡಿದ್ ಸರಿ ಇಲ್ಲ ಅಂತಂದ್ರು. ನಾನೇನ್ ತಪ್ಪು ಮಾಡಿದೆ? ನಮ್ಗೆ ಗೊತ್ತೇ ಆಗೋದಿಲ್ಲ. ಕೊನೆಗೆ ನಾನ್ ಸರಿ ಇಲ್ಲ. ಎಲ್ಲರಿಗೂ ಬೇಜಾರ್ ಮಾಡ್ತಾ ಬದುಕುವುದೇ ಪಾಡಾಯ್ತು ಅಂತ ತೀರಾ ಯೋಚನೆ ಮಾಡ್ತಾ ಚಿಂತೆಗೆ ಒಳಗಾಗ್ತೇವೆ.   ನನ್ನ ಪ್ರಕಾರ ಯಾವುದೂ ತಪ್ಪಲ್ಲ. ಈ ಜೀವನವನ್ನು ಅನುಭವಿಸಿ,  ಖುಷಿಯಾಗಿರಿ, ಅದಕ್ಕಾಗಿ ಏನೂ ಮಾಡಿದ್ರ...

ಉಪ್ಪು- ರುಚಿಗೆ ತಕ್ಕಷ್ಟು....

Image
  ಚಿ ಕ್ಕವಳಿರ್ಬೇಕಾದ್ರೆ ರಾತ್ರಿ ಮಲಗುವ ಹೊತ್ತಿಗೆ ದಿನಾ ಅಮ್ಮನನ್ನು ಪಿಡಿಸುತ್ತಿದೆ. ಅಮ್ಮಾ ಒಂದು ಕಥೆ ಹೇಳು ಅಂತ. ಅವಳಿಗೆ ಒಂದಷ್ಟು ಕಥೆಗಳು ಗೊತ್ತಿತ್ತು. ಅದರಲ್ಲಿ ರಾತ್ರಿ ಮಲಗುವ ಹೊತ್ತಿಗೆ ಹೇಳ್ತಿದ್ದದ್ದು ಕಾಗಕ್ಕ ಗುಬ್ಬಕ್ಕನ್ ಕಥೆ, ಪುಣ್ಯ ಕೋಟಿ ಕಥೆ, ಸುಟ್ಟವು ಮಾಣಿ ಕಥೆ ಹೀಗೆ ಒಂದಷ್ಟು. ಇವುಗಳನ್ನೇ ರೋಟೇಷನ್ ನಲ್ಲಿ ಪ್ರತಿ ದಿನ ಹೇಳ್ತಿದ್ಳು. ಹೇಳಿದ್ದನ್ನೇ ಹೇಳ್ಲಿಕೆ ಅವ್ಳಿಗೆ ಬೇಜಾರ್ ಆಗ್ತಿರ್ಲಿಲ್ಲ, ಪ್ರತಿ ಸಲ ಹೇಳುವಾಗಲೂ ಅಷ್ಟೇ ಸ್ವಾರಸ್ಯ ಕರವಾಗಿ, ರೋಮಾಂಚಕವಾಗಿ ಹೇಳ್ತಾ ಇದ್ಳು. ನಾನೂ ಅಷ್ಟೇ ಕುತೂಹಲದಿಂದ ಕೇಳ್ತಾ ಇದ್ದೆ.  ಇದ್ರಲ್ಲಿ ಕೆಲವು ಕಥೆಗಳನ್ನು ನೀವೂ ಕೇಳಿರಬಹುದು. ಅಮ್ಮಾ ಹೇಳುತ್ತಿದ್ದ ಕಥೆಗಳಲ್ಲಿ ಒಬ್ಬ ಸಾಹುಕಾರ ಹಾಗೂ ಅವನ ಮೂರು ಜನ ಮಗಳಂದಿರ ಕಥೆಯೂ ಒಂದು. ಇದರ ಶೀರ್ಷಿಕೆ ಏನು ಅಂತ ಗೊತ್ತಿಲ್ಲ, ಕಥೆ ಮಾತ್ರ ಇನ್ನೂ ಹಾಗೇ ನೆನಪಿದೆ.   ಒಂದೂರಲ್ಲಿ ಒಬ್ಬ ಸಾಹುಕಾರ ಇದ್ದನಂತೆ. ಆತನಿಗೆ ಮೂರು ಜನ ಹೆಣ್ಣು ಮಕ್ಕಳು. ಮೂರು ಜನರ ಮೇಲೂ ಆತನಿಗೆ ತುಂಬಾ ಪ್ರೀತಿ. ಆದರೆ ಮಕ್ಕಳಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇರಬಹುದು ಎಂಬ ಕುತೂಹಲ . ಅದಕ್ಕಾಗಿ ಒಂದು ದಿನ ತನ್ನ ಮೂರೂ ಜನ ಹೆಣ್ಣು ಮಕ್ಕಳನ್ನು ಬಳಿ ಕರೆದು ''ಮಕ್ಕಳೇ ನಿಮಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ? ಹೇಳುವಿರಾ?" ಎಂದು ಕೇಳುತ್ತಾನೆ. ಥಟ್ಟನೆ ಹಿರಿ ಮಗಳು "ಅಪ್ಪಾ ನನಗೆ ನಿಮ್ಮ ಮೇಲೆ ಸಕ್ಕರೆಯಷ್ಟು ಪ್ರೀತ...

ಹ್ಮ್!!!

Image
''ಆತ ಕಿತ್ತುಕೊಂಡದ್ದು ನನ್ನ ಊರುಗೋಲನ್ನ. ಬದುಕು ವ್ಯರ್ಥವಾಗುವ ಮೊದಲೇ ಅರ್ಥವಾಗಿದೆ. ಅರ್ಥವಾಗುತ್ತಲೇ ಇದೆ. ಎದ್ದು, ಬಿದ್ದು ನಡೆಯಲು ಕಲಿತೆ, ಶೀಘ್ರದಲ್ಲೇ ನೆಟ್ಟಗೆ ನಿಲ್ಲುವೆನೆಂಬ ಭರವಸೆ. ಭರವಸೆ,ಆಸೆ, ಬಯಕೆಗಳೆಲ್ಲಾ ದಿಟವಾಗುವುದೆಂಬ ಉತ್ಸಾಹ ನನ್ನಲ್ಲಿಲ್ಲ. ನಾ ಕಣ್ಬಿಟ್ಟು ಪ್ರಪಂಚ ನೋಡುವ ಹೊತ್ತಿಗೆ ಸೂರ್ಯನೇಕೋ ಮುನಿಸಿಕೊಂಡ, ಕತ್ತಲಾಯಿತು. ಆ ಕಿರು ಬೆರಳ ನೆನಪೇ ನನಗಿಲ್ಲ. ಕೂಸು ಮರಿ ಆಡಲಿಲ್ಲ, ಆ ಭುಜಗಳಲ್ಲಿ ಕುಳಿತುಕೊಳ್ಳುವಷ್ಟು ಸಮಯವೇ ಇರಲಿಲ್ಲ. ಆತ ದೂರ ಸರಿದ, ನಾ ದೊಪ್ಪೆಂದು ಬಿದ್ದು ಬಿಟ್ಟೆ, ೧೮ ವರುಷಗಳಿಂದಲೂ ಮೇಲೇಳಲು ಪ್ರಯತ್ನಿಸುತ್ತಲೇ ಇರುವೆ. ಯೂವತ್ತೋ ಒಂದು ದಿನ ಮೇ ಲೆದ್ದು ನಿಂತುಕೊಳ್ಳುವೆ, ಆದರೆ ದೂರ ಸರಿದಾತ ಹಿಂತಿರುಗುವನೇ? ಪ್ರತೀ ಸಂದರ್ಭದಲ್ಲೂ ಆ ಸ್ಥಾನ ಕಾಲಿ. ಮುಂದೆಂದೂ ಆ ಪದ ಬಳಕೆಗೆ ಆಸ್ಪದವಿಲ್ಲ. ಎರಡಕ್ಷರದ ಆ ಪದವನ್ನು ತೊದಲುವ ಮುನ್ನವೇ ಆ ಪಾತ್ರಕ್ಕೆ ನನ್ನ ಬಾಳಲ್ಲಿ ತೆರೆ ಎಳೆಯಲಾಯಿತು. ನಾನುಂಡ ಪ್ರತಿ ಅಗುಳು ಅನ್ನವೂ ನನಗೆ ಸೇರಬೇಕಾಗಿದ್ದದ್ದೇ?ಎಂಬ ಸಂಷಯ. ಕೋಗಿಲೆ ಮರಿಗಾದರೂ ಕಾಗೆ ಗೂಡಿಂದ ಹಾರಿ ಹೋಗಲು ಅವಕಾಶವಿದೆ. ಹಲವು ಬಾರಿ ಅತ್ತಿದ್ದೇನೆ, ಕೊರಗಿದ್ದೇನೆ, ಕಲ್ಪಿಸಿಕೊಂಡಿದ್ದೇನೆ ಆದರೆ ಆ ಊರುಗೋಲು ನನಗೆ ಸಿಗಲೇ ಇಲ್ಲ. ಈ ಬದುಕು ನಾ ಬಯಸಿ ಬಂದದ್ದಲ್ಲ. ಆದರೆ ಇಲ್ಲೇ ನಾ ನೆಮ್ಮದಿಯ ಹುಡುಕ ಹೊರಟೆ, ಹೊಂದಿಕೊಂಡೆ. ಮುಂದಿನ ಬದುಕು ನನ್ನ ಆಯ್ಕೆಗೆ ಬಿಟ್ಟದ್ದು. ನನ್ನ ...

ಭಾವನೆಗಳಿಗೂ ರೂಪ ಕೊಡಿ...

Image
ನಮ್ಮಲ್ಲಿ ಹಲವು ಭಾವನೆಗಳು ಭುಗಿಲೇಳಬಹುದು. ದ್ವೇಷ, ಅಸೂಯೆ, ನೋವು, ಹತಾಶೆ, ಮದ, ಮತ್ಸರ,ಸಂತೋಷ, ಪ್ರೀತಿ ಹೀಗೆ ಒಳ್ಳೆಯದ್ದು-ಕೆಟ್ಟದ್ದು ಮಣ್ಣೋ- ಮಸಿಯೋ ಮತ್ತಿನ್ನೆಲ್ಲವೂ. ಇದು ನಮ್ಮ ತಪ್ಪಲ್ಲ. ಹಾಗೆಂದು ಕೇವಲ ನಮ್ಮ ಸುತ್ತಲಿನವರದ್ದು, ಸಮಾಜದ್ದು ಮಾತ್ರವೇ ಅಲ್ಲ. ಆ ಭಾವನೆಗಳ ಹಿಂದೆ ದ್ವೇಷ ಸಾಗಿಸುತ್ತಾ, ಕಣ್ಣೀರಿಡುತ್ತಾ ಗೋಗರೆಯುತ್ತಾ,ನಗುತ್ತಾ ಕೇಕೆ ಹಾಕುತ್ತಾ ಹೋದರೆ ನಮಗೆ ಸಿಗುವುದಾದರೂ ಏನು? ಮತ್ತೆ ಅದೇ ಭಾವನೆಗಳು. ಅವುಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ಕಥೆಯಾಗಿಸಿ, ಕವನವಾಗಿಸಿ, ಅಕ್ಷರಗಳಲ್ಲಿ ಪೋಣಿಸಿ. ಸಿಗುವುದೇನು ಗೊತ್ತೇ ಒಂದು ಹಿಡಿ ನೆಮ್ಮದಿ. ಭಾವನೆಗಳನ್ನು ಹತ್ತಿಕ್ಕುವಿರಾದರೆ ಪೆನ್ ಪೇಪರ್ಗಳ ಮೂಲಕ ಹತ್ತಿಕ್ಕಿ.  :-) # ಪ್ರಗಲ್ಭಾ #

ಹೆಣ್ಣು ಬದುಕಿನ ಸ್ವಗತ

Image
ಹೆಣ್ಣಿನ ಕಡೆಯವರು ಬರುತ್ತಾರೆಂದು  ಹಳೆ ಗುಜುರಿ ಮನೆಗೆ ಬಣ್ಣ ಕೊಟ್ಟರು. ಮದುವೆ ನಡೆಯಿತು, ಮದುಗಳು ಮನೆಗೆ ಬಂದಳು. ಬರು ಬರುತ್ತಾ ಬಣ್ಣ ಉದುರಲು ಪ್ರಾರಂಭವಾಯಿತು. ಚಂದಮಾಸಿತು, ಮಣ್ಣಿನ ಗೋಡೆಯದು ಹಳತು  ಎಂಬುದಾಕೆಗೆ ಖಾತ್ರಿಯಾಯಿತು. ಕಾಲ ಕಳೆಯಿತು, ಮಳೆಗಾಲವದು ಮನೆಯ ಮಾಡು ಸೋರುವುದೂ ಆಕೆಗೆ ತಿಳಿಯಿತು. ಇಡುತ್ತಾರಲ್ಲಲ್ಲಿ ಪಡಿಗೆ, ಪಾಟೆ, ಪಾತ್ರಗಳನ್ನು. ಅದು ಸೆಕೆಗಾಲ, ಗೆದ್ದಲುಗಳು ನಾನಾ ತರದ ಇರುವೆಗಳು, ಸೆಕೆ ಹಾತೆಗಳು ಇತ್ಯಾದಿಗಳು ಮನೆಯ ಸಂಧಿ-ಗೊಂದಿಗಳ  ಮಾಟೆಯಿಂದ ಏಳಲಾರಂಭಿಸಿದವು. ಅರ್ಥವಾಯಿತಾಕೆಗಾಗ ಇದು ಜೀವ ವೈವಿಧ್ಯಗಳ  ತಾಣವೆಂದು (bio diversity hot spot) ಒಂದು ಮುಸ್ಸಂಜೆ ಚಿಂತಿಸುತ್ತಾ ನಿಂತಿದ್ದಳು ಗಿಳಿಬಾಗಿಲಿಗೊರಗಿ ನೀರವ ಮೌನ, ಸುತ್ತಲೂ ಕತ್ತಲು ಜಾರಿ ಬರುವ ಹೊತ್ತು. "ದೇವ! ಕೆಟ್ಟೆನೇ ಊರವರ ಮಾತು ನಂಬಿ?" ಆಗಲೇ ಪರಮಾತ್ಮ ಪ್ರತ್ಯಕ್ಷನಾದನೇನೋ! ನೀಡಿಹನು ಭಸ್ಮವ ತನ್ನ ಮೊರೆಯ ಕೇಳಿ, ಅಲ್ಲ ಅದು ಕುಟ್ಟೆ ಸುರಿದದ್ದು.  ಬಾಗಿಲೂ ಕುಂಬು. ಬಣ್ಣ ಮರೆಮಾಡಿತು,  ಕೊಟ್ಟಗೆಯಂತಿಹ ಮನೆಯ ಅರಮನೆಯೆಂದು  ತಿಳಿದು ಮೋಸಹೋದೆವು, ನಾನು ನನ್ನ ತವರಿನವರು. ಗೋಸುಂಬೆ ಅಂದು ಸಿಟ್ಟುಗೊಂಡಿತ್ತು ತನ್ನನ್ನು ಸೋಲಿಸಿದ ಜನರ ಕಂಡು. ತಲೆಬಗ್ಗಿಸಿ ಹಾರ ಹಾಕಿಸಿಕೊಂಡಾತ, ಕಾಲುಂಗುರ ಹಾಕಿದವಳು,  ಮುಂಡಾಸು ತೊಟ್ಟು ದಕ್ಷಿಣ...

ಕಾಲಯಾಪನೆಯ ಕೂಗು ನಿರಂತರ....

Image
ಅಂದು ಒಂದು ಮುಸ್ಸಂಜೆ ಸೂರ್ಯ ಮುಳುಗುವ ಹೊತ್ತು ಉದಯಿಸಲಿತ್ತು ನನ್ನ ಬಾಳಿನ ಸಂಪತ್ತು ಅದೇ ಚಿಂತೆಯಾಗಿ ಕಾಡುತಿತ್ತು ಎಲ್ಲಾ ಅಮ್ಮಂದಿರಂತೆ ನಾ ಸಂಭ್ರಮಿಸಲಾರೆ ಕಂದನ ಆಗಮನದ ನಿರೀಕ್ಷೆ ಯಲ್ಲಿ ಲೀನಳಾಗಲಾರೆ ಏಕೆಂದರೆ ನನ್ನ ತಾಯ್ತನಕ್ಕೆ ಪರವಾನಗಿ ಇರಲಿಲ್ಲ ವೇದ ಅಪೌರುಷೇಯ, ಆದರೆ........... ಪುರೂರವನ ಪಿತಾನಾರು ಎಂದರೆ ಉತ್ತರ.......?? ಕಡಲೊಡಲಿಗೆ ಸೇರಿಸಲೇ? ಮಡಿಲಲ್ಲಿಟ್ಟು ಬರಲೇ? ಕ್ರೂರಿಯೇ ಚಂದ್ರಹಾಸನ ಕೊಲ್ಲದಿರಲು ತಾಯಿ ನಾನೆಂತು ಹಸುಳೆಯ ಕತ್ತು ಹಿಸುಕಲಿ? ಕ್ಷಣವೇ ನೆನಪಾದಳು ಕುಮಾರಿ ಕುಂತಿ ಅಂದು ಆಕೆಯ ಎದುರು ಪ್ರತ್ಯಕ್ಷನಾಗಿದ್ದ ಸೂರ್ಯದೇವ ಇಂದು ಅಸ್ತಂಗತ, ಒಂಟಿ ನಾ ಆ ಬಾಲೆಯೊಡನೆಂತು ಹಂಚಿಕೊಳ್ಳಲಿ ನನ್ನ ಮನದ ಇಂಗಿತ.. ಆ ನೋವಲ್ಲಿ ನೋಡಿದ್ದು ರಕ್ತವರ್ಣದ ಆ ಕಂದಮ್ಮನ ಮುದ್ದು ಮೊಗವನ್ನು ಒಡನೆಯೇ ನೋವು ಮಾಯ, ಆದರೇನು? ನನಗೆ ಋಣವಿಲ್ಲವಲ್ಲ, ಅದು ಕರ್ಣನೋ? ವೈದೇಹಿಯೋ? ಬೆಸ್ತನಿಗಾದರೂ ಸೇರಲಿ, ಅರಸನಿಗಾದರೂ ದಕ್ಕಲಿ ಸುಖವಾಗಿರಲಿ ಎಂದು ತೊರೆದು ಬರುವಾಗಾದದ್ದು  ಕೇವಲ ನೋವಲ್ಲ, ಯಾತನೆಯೋ, ವೇದನೆಯೋ ವಿವರ್ಣನೀಯ.. ಅಂಬಾ ಎಂದು ಓಡುತ್ತಾ ಕರುವೊಂದು ತನ್ನಮ್ಮನ ಕೆಚ್ಚಲಿನ ಹಾಲ ಕುಡಿಯುತ್ತಲಿತ್ತು ತಬ್ಬಲಿ ಮಕ್ಕಳ ಕಣ್ಣಮುಂದೆ ಆ ಗೋವು ತನ್ನ ಕರುವನ್ನು ನೆಕ್ಕಿ ಮುದ್ದಿಸುತ್ತಲಿತ್ತು ತಮ್ಮ ವಿಳಾಸವೇ ಅರಿಯದ ಮಕ್ಕಳು ನಿರಾಶೆಯ ದೃ...

ನನ್ನ ಲೇಖನಿ ಬರೆಯುತ್ತಿಲ್ಲ.....

Image
ನನ್ನ ಲೇಖನಿ ಬರೆಯುತ್ತಿಲ್ಲ. ಷಾಯಿ ಗಟ್ಟಿಯಾಗಿದೆ, ಖಾಲಿಯಾಗಲಿಲ್ಲ.ನಿಬ್ ನ್ನು ಬೆಂಕಿಗೆ ಹಿಡಿಯಲು ಇಷ್ಟವಿಲ್ಲ. ಉರಿದ ಬೆಂಕಿಯನ್ನು ಆರಿಸುವುದು ಕಷ್ಟ. ಬೆಂಕಿ ಹಚ್ಚುವವರು ಸುಮ್ಮನಿದ್ದಾರೆ. ಬಹುಷಃ ಇಂಧನ ಕಾಲಿಯಾಗಿರಬೇಕು ಅಥವಾ ದಹ್ಯ ವಸ್ತುಗಳು ದೊರಕುತ್ತಿಲ್ಲ. ಗೊತ್ತಿಲ್ಲ, ಬೆಂಕಿ ನನಗೆ ಕಾಣಿಸದೇ ಇರಬಹುದು, ಶಾಖ ಸೋಕದೇ ಇರಬಹುದು. ನನ್ನ ಲೇಖನಿ ಬರೆಯುತ್ತಿಲ್ಲ. ಬಹುಷಃ ಹೃದಯಕ್ಕೆ ವಯಸ್ಸಾಗಿರಬೇಕು, ಬಂಜೆಯಂತೂ ಅಲ್ಲ. ಮೊನ್ನೆ ಮೊನ್ನೆಯ ತನಕ ಬಾಣಂತನದ ಸೊಬಗನ್ನು ಅನುಭವಿಸಿದೆ. ಮಿದುಳು ಬರಡಾಗಿದೆ, ಬುದ್ಧಿ ಕೊರಡಾಗಿದೆ. ಯೋಚನೆಗಳ ಬರಗಾಲವಿರಬಹುದೇನೋ. ಒಂದೂ ತಿಳಿಯುತ್ತಿಲ್ಲ. ನನ್ನ ಲೇಖ ನಿ ಬರೆಯುತ್ತಿಲ್ಲ. ಶೈಶವಾವಸ್ಥೆಯಲ್ಲಿದ್ದ ಕೆಲವು ಭಾವನೆಗಳೂ ಸಾಯುತ್ತಿವೆ. ಅದಾವ ರೋಗ? ಅಯ್ಯೋ! ಕಣ್ಣುಗಳು ಮಂಜಾಗುತ್ತಿವೆ, ಕನ್ನಡಕ ಕಾಣೆಯಾಗಿದೆ, ಹಸುರುಟ್ಟ ಪ್ರಕೃತಿಯ ಜಳಕದ ಸದ್ದೂ ಅಸ್ಪಷ್ಟ. ಕಿವಿಗಳೂ ಕಿವುಡಾಗಿವೆ. ಉರಿದ ಬೆಂಕಿಗೆ ಚರ್ಮ ಸುಟ್ಟು ಕರಕಲಾಗಿರಬೇಕು, ಸ್ಪರ್ಶವನ್ನೂ ಗ್ರಹಿಸುತ್ತಿಲ್ಲ. ನನ್ನ ಲೇಖನಿ ಬರೆಯುತ್ತಿಲ್ಲ. ಸುತ್ತಲಿದ್ದ ಕಿರಾತಕರೂ ಕಾಣೆಯಾಗಿದ್ದಾರೆ, ಕಿನ್ನರಿ ನುಡಿಸುವವರೂ ಕಣ್ಮರೆಯಾಗಿದ್ದಾರೆ. ಏಕಾಂಗಿತನದ ಹಮ್ಮಿಲ್ಲ, ಏಕಾಂತದ ಹಂಗಿಲ್ಲ. ಸಮಯವನ್ನು ಸಹಿಸಬೇಕಾಗಿಲ್ಲ, ಅದಕ್ಕಾಗಿ ಕಾಯಬೇಕಾಗಿಲ್ಲ. ಇನ್ನೆಷ್ಟು ಕಾರಣಬೇಕು? ಭಾವನೆಗಳು ಹುಟ್ಟದಿರಲು? ಹಸಿವಾಗದಿರಲು? ಕಾರಣ ಗಂಟೆಗೊಮ್ಮೆ ತಿನ್ನು...

ಬಂದೇ ಬಿಟ್ಟಿತು ಜೂನ್....!!!

Image
ಪ್ರಕೃತಿಗೆ ವಸಂತ ಎಷ್ಟು ನವೀನವೋ ಅಷ್ಟೇ ನೂತನವಾದದ್ದು ವಿದ್ಯಾರ್ಥಿಗಳಿಗೆ ಜೂನ್ ತಿಂಗಳು. ಮೊದಲ ಮಳೆ ಭೂಮಿಗೆ ಬಿದ್ದಾಗ ಮಣ್ಣಿನ ಪರಿಮಳ ಬರ್ತದಲ್ಲಾ ಹಾಗೆ ಜೂನ್ ತಿಂಗಳಲ್ಲಿ ಪುಸ್ತಕದ ಪರಿಮಳ. ಈ ಮಣ್ಣು, ಪುಸ್ತಕ ಇವುಗಳು ಅರೋಮ್ಯಾಟಿಕ್ ಕಾಂಪೌಂಡ್ಸ ಅಲ್ಲ. ಆದರೂ ಪರಿಮಳ ಅನಿಸಿಬಿಡ್ತದೆ. ಕಾರಣ, ಅವುಗಳ ಹಿಂದೆ ಇರುವ ಸಾಲು ಸಾಲು ನೆನಪುಗಳು. ಮೊದಲ ಬಾರಿಗೆ ಒಂದನೇ ಕ್ಲಾಸಲ್ಲಿ ಹೊಸಪುಸ್ತಕದ ಪರಿಮಳ ತಿಳಿದದ್ದು. ಆದ ಕಾರಣ ಇಂದಿಗೂ ಪುಸ್ತಕದ ಸುವಾಸನೆ ಬಡಿದಾಗ ೧ನೇ ಕ್ಲಾಸ್ ನೆನಪಾಗ್ತದೆ. ಈ ಜೂನ್ ತಿಂಗಳು ಶಾಲಾ ಕಾಲೇಜುಗಳ ಪ್ರಾರಂಭದ ತಿಂಗಳು. ವಿದ್ಯಾರ್ಥಿಗಳು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ದಾಟುವ ಪ‌ರ್ವಕಾಲ. ಹಾಗೂ ಹೊಸತೊಂದು ಚೈತನ್ಯ ಶಕ್ತಿ ಅಲ್ಲಿ ಸಂಚಾರ ಅಗ್ಲಿಕ್ಕೆ ಪ್ರಾರಂಭ ಆಗ್ತದೆ. ಅಲ್ಲಿ ಎಲ್ಲವೂ ಹೊಸತು, ಬ್ಯಾಗ್, ಕೊಡೆ, ಚಪ್ಪಲು, ಕಂಪಾಸ್ ಬಾಕ್ಸ್, ಓದುವ ಬರೆಯುವ ಪುಸ್ತಕಗಳು, ತರಗತಿ ಕೋಣೆಗಳು, ಒಮ್ಮೊಮ್ಮೆ ಸಹಪಾಠಿಗಳು, ಇನ್ನೊಮ್ಮೊಮ್ಮೆ ಪಾಠ ಹೇಳುವ ಮಾಸ್ಟ್ರು, ಸಿಲೇಬಸ್, ಬೆಂಚು ಡೆಸ್ಕು‍ಗಳು. ಹೀಗೆ ಹೊಸತರದ್ದೇ ರಾಯಭಾರ. ಎರಡು ತಿಂಗಳು ಮಕ್ಕಳಿಲ್ಲದೆ ಅನಾಥವಾಗಿದ್ದ ಶಾಲೆ ಕಾಲೇಜುಗಳ ಜಗಲಿಗಳು, ಕೋಣೆಗಳು ಮತ್ತೆ ಹೊಸ ಬಾಳಂತನವನ್ನು ಅನುಭವಿಸಲು ಸಿದ್ದವಾಗ್ತದೆ, ಬಹುಷಃ ಅವುಗಳಲ್ಲೂ ಎನೋ ಒಂದು ಸಂಭ್ರಮ. ಅಲ್ಲಿನ ಕಿಟಕಿಯ ಸರಳುಗಳು, ಕಂಬಗಳು ಗೋಡೆಯ ಮೇಲಿನ ಚಿತ್ತಾರಗಳು ಮತ್ತೆ ತಯಾರಾಗ್ತವೆ, ಮಕ್ಕಳ ಆಟಕ್ಕೆ ...

ಬಾಳ ಪಯಣ ನಿರಂತರ....

Image
ಸಮಯ ಸಾಗುವ ಪರಿಯ ಹೇಳ್ಲಿಕ್ಕೆ ಕಷ್ಟ. ಕಾಲ ಎಷ್ಟು ಕಿಲೋ ಮೀಟರ್ ವೇಗದಲ್ಲಿ ಓಡ್ತದೆ ಅಂತ ಗೊತ್ತಾಗುದಿಲ್ಲ. ಮನಸ್ಸು ಅತ್ಯಂತ ವೇಗವಾಗಿ ಓಡುವಂತದ್ದು. ನನಿಗನ್ನಿಸ್ತದೆ ಅದರ ನಂತರದ ಸ್ಥಾನ ಕಾಲಕ್ಕೆ ಕೊಡ್ಬೋದೇನೋ ಅಂತ. ಮನಸ್ಸು ಸಂಚರಿಸುತ್ತದ, ಆದರೆ ದೇಹ ಇದ್ದಲ್ಲೇ ಇರುತ್ತದೆ. ಆದರೆ ಕಾಲ ಹಾಗಲ್ಲ ಚಲಿಸುತ್ತಾ ಚಲಿಸುತ್ತಾ ಎಲ್ಲವನ್ನು ಎಲ್ಲರನ್ನೂ ಕಿಞ್ಚಿತ್ತಾದರೂ ಬದಲಿಸಿಯೇ ತೀರುತ್ತದೆ. ಕಾಲ ಎಂಬ ಬಂಡಿಯಲ್ಲಿ ಕುಳಿತು ಪಯಣಿಸುವ (ಕೆಲವರು ಪವಣಿಸುವ) ಪಯಣಿಗರಂತೆ ನಾವು. ಎಲ್ಲಿಯೋ ಇದ್ದವರು ಎಲ್ಲಿಗೋ ತಲುಪಿ ಬಿಡುತ್ತೇವೆ. (ಭೌತಿಕವಾಗಿಯೂ, ಭೌದ‌್ಧಿಕವಾಗಿಯೂ) ಪಯಣಿಗ ಎಚ್ಚೆತ್ತುಕೊಂಡಿದ್ದರೆ ಸುತ್ತಲಿನ ವಾತಾವರಣವನ್ನು ಆಸ್ವಾದಿಸುತ್ತಾನೆ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ, ಒಳ್ಳೆದು ಕೆಟ್ಟದ್ದನ್ನು ತಿಳಿದುಕೊಳ್ಳುತ್ತಾನೆ, ಕೊನೆಗೆ ನಿಶ್ಚಿತ ಗುರಿಯನ್ನು ತಲುಪುತ್ತಾನೆ. ನಿದ್ರಿಸಿದ್ದರೂ ಇಳಿಯುವ ಸ್ಥಳ ತಲುಪುತ್ತಾನೆ. ಆದರೆ ಆತ ಪಡೆದುಕೊಂಡದ್ದು, ತಿಳಿದುಕೊಂಡದ್ದು, ಅನುಭವಿಸಿದ್ದು ಏನೂ ಇರುವುದಿಲ್ಲ. ಇನ್ನು ಕೆಲವರು ಅರ್ಧದಲ್ಲೇ ಇಳಿದುಕೊಳ್ಳುತ್ತಾರೆ.

ಹ್ಯಾಪಿ ಜರ್ನಿ

Image
ಕಾಲೊಂದನ್ನು ಮುರಿದ, ಊರುಗೋಲನ್ನು ಕಿತ್ತುಕೊಂಡ, ಪರ್ವತದಾಚೆ ದೀಪವೊಂದನ್ನು ಬೆಳಗಿಸಿ ನೋಡು ಎಂದ, ಹೋಗಬೇಕಾದ ದಾರಿಯಲ್ಲಿ ಮಳ್ಳು ಕಲ್ಲುಗಳನ್ನು ತುಂಬಿ ಸಾಗು ಎಂದ, ಒಂಟಿ ಕಾಲಿನ ಕುಂಟಿ ಕೂಸು ನಾ ಟೊಂಕ ಹಾಕಿ ಕೊಂಡು ಏರುತ್ತಿರುವೆ, ಆ ಕಡೆ ಈ ಕಡೆ ಪ್ರಪಾತ, ಮಧ್ಯದ ಕಾಲು ದಾರಿಯಲ್ಲಿ ಜಾರುತ್ತಿರುವೆ, ಮತ್ತೆ ಮತ್ತೆ ಏರುತ್ತಲೇ ಇರುವೆ.