ಉಪ್ಪು- ರುಚಿಗೆ ತಕ್ಕಷ್ಟು....

ಚಿ ಕ್ಕವಳಿರ್ಬೇಕಾದ್ರೆ ರಾತ್ರಿ ಮಲಗುವ ಹೊತ್ತಿಗೆ ದಿನಾ ಅಮ್ಮನನ್ನು ಪಿಡಿಸುತ್ತಿದೆ. ಅಮ್ಮಾ ಒಂದು ಕಥೆ ಹೇಳು ಅಂತ. ಅವಳಿಗೆ ಒಂದಷ್ಟು ಕಥೆಗಳು ಗೊತ್ತಿತ್ತು. ಅದರಲ್ಲಿ ರಾತ್ರಿ ಮಲಗುವ ಹೊತ್ತಿಗೆ ಹೇಳ್ತಿದ್ದದ್ದು ಕಾಗಕ್ಕ ಗುಬ್ಬಕ್ಕನ್ ಕಥೆ, ಪುಣ್ಯ ಕೋಟಿ ಕಥೆ, ಸುಟ್ಟವು ಮಾಣಿ ಕಥೆ ಹೀಗೆ ಒಂದಷ್ಟು. ಇವುಗಳನ್ನೇ ರೋಟೇಷನ್ ನಲ್ಲಿ ಪ್ರತಿ ದಿನ ಹೇಳ್ತಿದ್ಳು. ಹೇಳಿದ್ದನ್ನೇ ಹೇಳ್ಲಿಕೆ ಅವ್ಳಿಗೆ ಬೇಜಾರ್ ಆಗ್ತಿರ್ಲಿಲ್ಲ, ಪ್ರತಿ ಸಲ ಹೇಳುವಾಗಲೂ ಅಷ್ಟೇ ಸ್ವಾರಸ್ಯ ಕರವಾಗಿ, ರೋಮಾಂಚಕವಾಗಿ ಹೇಳ್ತಾ ಇದ್ಳು. ನಾನೂ ಅಷ್ಟೇ ಕುತೂಹಲದಿಂದ ಕೇಳ್ತಾ ಇದ್ದೆ. ಇದ್ರಲ್ಲಿ ಕೆಲವು ಕಥೆಗಳನ್ನು ನೀವೂ ಕೇಳಿರಬಹುದು. ಅಮ್ಮಾ ಹೇಳುತ್ತಿದ್ದ ಕಥೆಗಳಲ್ಲಿ ಒಬ್ಬ ಸಾಹುಕಾರ ಹಾಗೂ ಅವನ ಮೂರು ಜನ ಮಗಳಂದಿರ ಕಥೆಯೂ ಒಂದು. ಇದರ ಶೀರ್ಷಿಕೆ ಏನು ಅಂತ ಗೊತ್ತಿಲ್ಲ, ಕಥೆ ಮಾತ್ರ ಇನ್ನೂ ಹಾಗೇ ನೆನಪಿದೆ. ಒಂದೂರಲ್ಲಿ ಒಬ್ಬ ಸಾಹುಕಾರ ಇದ್ದನಂತೆ. ಆತನಿಗೆ ಮೂರು ಜನ ಹೆಣ್ಣು ಮಕ್ಕಳು. ಮೂರು ಜನರ ಮೇಲೂ ಆತನಿಗೆ ತುಂಬಾ ಪ್ರೀತಿ. ಆದರೆ ಮಕ್ಕಳಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇರಬಹುದು ಎಂಬ ಕುತೂಹಲ . ಅದಕ್ಕಾಗಿ ಒಂದು ದಿನ ತನ್ನ ಮೂರೂ ಜನ ಹೆಣ್ಣು ಮಕ್ಕಳನ್ನು ಬಳಿ ಕರೆದು ''ಮಕ್ಕಳೇ ನಿಮಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ? ಹೇಳುವಿರಾ?" ಎಂದು ಕೇಳುತ್ತಾನೆ. ಥಟ್ಟನೆ ಹಿರಿ ಮಗಳು "ಅಪ್ಪಾ ನನಗೆ ನಿಮ್ಮ ಮೇಲೆ ಸಕ್ಕರೆಯಷ್ಟು ಪ್ರೀತ...