ಒಲವಿಗೂ...... ಈ ನಗುವಿಗೂ.....



ನಗುವೇ, ನೀ ನನ್ನೊಳು ಆಗು ಜೀವಂತಾ
ಒಲವೇ, ಬಂದ ನೋಡು ನಿನ್ನಯಾ ಸಖಾ...
ಒಲವಿಗು ಈ ನಗುವಿಗೂ
ಅದೇಕೋ ಚಿಕ್ಕ ಮುನಿಸು
ಖಾಲಿ ಇರದ ಗೂಡಿನಲ್ಲಿ
ಒಲವು ಇನಿತು ಬಂದು ತುಂಬಿ
ಎಲ್ಲೋ ಹೋದವು ಆ ಮನದ ಮಲಗಳು
ಅಲ್ಲೇ ಸ್ನೇಹವಾಯಿತು, ಒಲವಿಗೂ.... ನಗುವಿಗೂ....
ಅಲ್ಲಿ ಒಲವಿದೆ, ಅದಕಾಗಿಯೇ ಹುಸಿಮುನಿಸು
ಒಲವು ಸುಂದರ ರಾಜಕುಮಾರಿ
ನಗು ಒಬ್ಬ ಸಾಹುಕಾರ...
ಹೊರ ನಡೆದ ಅಲ್ಲಿಂದ ತಣ್ಣಗಾಗಿ....
ಗೂಡು ಮತ್ತೆ ಖಾಲಿ, ಅರಿಯದೇ ನಿನ್ನ ಖಯಾಲೀ....
ಆಗಲೇ ಆಗಮನವಾಯಿತೂ ಆ ಬೇಸರ,
ಯೋಚನೆ, ನೋವಿನಾ ನೂಲು...
ಒಲವು ಏಕಾಂಗಿಯಾಗಿ ಬಂಧಿಯಾಯಿತು
ಬೆಂದು ಹೋಯಿತು, ಕೊನೆಗೆ ನಂದ ಹೊರಟಿತು
ಅಳುವೂ ಇದನು ಕಂಡು ಅತ್ತು ಬಿಟ್ಟಿತು
ಹನಿಯೊಂದು ಜಿಗಿದು ಹೋಗಿ ನಗುವ ಕರೆಯಿತು
ನಗುವು ಪುನಃ ಮರಳಿತು....
ಗೂಡು ಮತ್ತೆ ತುಂಬಿತು, ಭಾವ ಹರಿಯಿತು



Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7