ಗರುಡ ಹಾರಿದ ಹಾದಿ: ಭಾಗ - 2
ವೃತ್ತಿ ಜೀವನ ಆರಂಭ ೨೦೦೬ ಸೆಪ್ಟೆಂಬರ್ ೨೪ರಂದು ಕೆಂಚಪ್ಪನವರು ಊರು ಬಿಟ್ಟು ಬೆಂಗಳೂರಿಗೆ ಹೊರಡುತ್ತಾರೆ. ಬೆಂಗಳೂರಿಗೆ ಹೋಗಲು ಪಕ್ಕದೂರು ಶಿವಪೂರ್ (ಹಳ್ಳೂರ್) ನವರಾದ, ಸಹಪಾಟಿಯ ತಂದೆ ಸಹಾಯಮಾಡುತ್ತಾರೆ. ಬೆಂಗಳೂರಲ್ಲಿ ಶಿವಾಜಿನಗರದಲ್ಲಿ ಒಂದು ಹೋಟೆಲ್ ರೂಮ್ ಬುಕ್ ಮಾಡಿ ಅಲ್ಲಿ ಉಳಿದುಕೊಂಡರು. ಮರುದಿನ ಏರ್ಮೆನ್ ಸೆಲೆಕ್ಷನ್ ಸೆಂಟರ್ಗೆ ಹೋಗುತ್ತಾರೆ. ಅಲ್ಲಿಗೆ, ಆಯ್ಕೆ ಆದ ಎಲ್ಲರೂ ಬಂದಿದ್ದರು. ಅಲ್ಲಿ ಇವರ ಎಲ್ಲಾ ಡಿಟೇಲ್ಸ್ಗಳನ್ನು ಪರೀಕ್ಷಿಸಿ ಡಾಕ್ಯುಮೆಂಟ್ಗಳನ್ನು ತಯಾರು ಮಾಡುತ್ತಾರೆ. ಕೊನೆಗೆ ಜಿ ಟಿ ಐ, ಐ ಎಫ್ ಎಸ್, ಐ ಎ ಎಫ್ ಜಿ ಗಳಿಗೆ ದೆಹಲಿಯಿಂದ ವೇಕೆನ್ಸಿ ಬರಲಿಲ್ಲ, ಹಾಗಾಗಿ ಈಗ ನಿಮ್ಮ ಊರಿಗೆ ಹೋಗಿ ಮತ್ತೆ ಲೆಟರ್ ಕಳುಹಿಸುತ್ತೇವೆ ಆಗ ಬನ್ನಿ ಎನ್ನುತ್ತಾರೆ. ಊರಲ್ಲಿ ಎಲ್ಲರಿಗೂ ಟಾ ಟಾ ಬಾಯ್ ಹೇಳಿ ಬಂದಿದ್ದವರು ಮತ್ತೆ ಊರಿಗೆ ಹೋಗಿ ಏನೆಂದು ಹೇಳುವುದು, ಪುನಃ ಕಾಲ್ ಲೆಟರ್ ಬರಲಿಲ್ಲವಾದರೆ ಎಂದು ಈ ಗ್ರೂಪ್ಗಳಿಗೆ ಆಯ್ಕೆ ಆದ ಹುಡುಗರಿಗೆ ಆತಂಕ. ಕೊನೆಯ ದಿನ ಕೊನೆಯ ಸಮಯಕ್ಕೆ ಮತ್ತೆ ಇವರನ್ನು ಕರೆದು ನಾಲ್ಕು ವೇಕೆನ್ಸಿ ಬಂದಿದೆ ಬೇಗ ಆಫೀಸ್ಗೆ ಬನ್ನಿ ಎನ್ನುತ್ತಾರೆ. ಈ ಮೂರು ಗ್ರೂಪ್ಗಳಿಗೆ ಸೆಲೆಕ್ಟ್ ಆಗಿ ಬಂದಿದ್ದ ಐದು ಜನರಲ್ಲಿ ನಾಲ್ಕು ಜನರನ್ನು ಸೇರಿಸಿಕೊಳ್ಳುತ್ತಾರೆ, ಅವರಲ್ಲಿ ಕೆಂಚಪ್ಪನವರೂ ಒಬ್ಬರು. ಅದೇ ದಿನ ರಾತ್ರಿ ರಾಣಿ ಚೆನ್ನಮ್ಮ ಟ್ರೈನ್...

Comments
Post a Comment
thank you...