ಬಾಳ ಪಯಣ ನಿರಂತರ....



ಸಮಯ ಸಾಗುವ ಪರಿಯ ಹೇಳ್ಲಿಕ್ಕೆ ಕಷ್ಟ. ಕಾಲ ಎಷ್ಟು ಕಿಲೋ ಮೀಟರ್ ವೇಗದಲ್ಲಿ ಓಡ್ತದೆ ಅಂತ ಗೊತ್ತಾಗುದಿಲ್ಲ. ಮನಸ್ಸು ಅತ್ಯಂತ ವೇಗವಾಗಿ ಓಡುವಂತದ್ದು. ನನಿಗನ್ನಿಸ್ತದೆ ಅದರ ನಂತರದ ಸ್ಥಾನ ಕಾಲಕ್ಕೆ ಕೊಡ್ಬೋದೇನೋ ಅಂತ. ಮನಸ್ಸು ಸಂಚರಿಸುತ್ತದ, ಆದರೆ ದೇಹ ಇದ್ದಲ್ಲೇ ಇರುತ್ತದೆ. ಆದರೆ ಕಾಲ ಹಾಗಲ್ಲ ಚಲಿಸುತ್ತಾ ಚಲಿಸುತ್ತಾ ಎಲ್ಲವನ್ನು ಎಲ್ಲರನ್ನೂ ಕಿಞ್ಚಿತ್ತಾದರೂ ಬದಲಿಸಿಯೇ ತೀರುತ್ತದೆ. ಕಾಲ ಎಂಬ ಬಂಡಿಯಲ್ಲಿ ಕುಳಿತು ಪಯಣಿಸುವ (ಕೆಲವರು ಪವಣಿಸುವ) ಪಯಣಿಗರಂತೆ ನಾವು. ಎಲ್ಲಿಯೋ ಇದ್ದವರು ಎಲ್ಲಿಗೋ ತಲುಪಿ ಬಿಡುತ್ತೇವೆ. (ಭೌತಿಕವಾಗಿಯೂ, ಭೌದ‌್ಧಿಕವಾಗಿಯೂ) ಪಯಣಿಗ ಎಚ್ಚೆತ್ತುಕೊಂಡಿದ್ದರೆ ಸುತ್ತಲಿನ ವಾತಾವರಣವನ್ನು ಆಸ್ವಾದಿಸುತ್ತಾನೆ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ, ಒಳ್ಳೆದು ಕೆಟ್ಟದ್ದನ್ನು ತಿಳಿದುಕೊಳ್ಳುತ್ತಾನೆ, ಕೊನೆಗೆ ನಿಶ್ಚಿತ ಗುರಿಯನ್ನು ತಲುಪುತ್ತಾನೆ. ನಿದ್ರಿಸಿದ್ದರೂ ಇಳಿಯುವ ಸ್ಥಳ ತಲುಪುತ್ತಾನೆ. ಆದರೆ ಆತ ಪಡೆದುಕೊಂಡದ್ದು, ತಿಳಿದುಕೊಂಡದ್ದು, ಅನುಭವಿಸಿದ್ದು ಏನೂ ಇರುವುದಿಲ್ಲ. ಇನ್ನು ಕೆಲವರು ಅರ್ಧದಲ್ಲೇ ಇಳಿದುಕೊಳ್ಳುತ್ತಾರೆ.

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....