ಇಲ್ಲಿ ಹೇಳಲು ಹೊರಟಿರುವ ಕಥೆ ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಬೆಳೆದ ಒಬ್ಬ ಸಾಧಕನದ್ದು. 'ಸಾಧಕ' ಅಂದಾಕ್ಷಣ, ಸಿನಿಮಾ, ಕ್ರಿಕೆಟ್ ತಾರೆಯರ ಬಗೆಗೋ ಅಥವಾ ಯಾರಾದರೂ ಬಿಸ್ನೆಸ್ ಮ್ಯಾನ್ಗಳ ಹೆಸರೋ, ರಾಜಕಾರಣಿಗಳ ಹೆಸರೋ ತಕ್ಷಣಕ್ಕೆ ನೆನಪಾಗುವುದು ಸಹಜ, ಆದರೆ ಇಲ್ಲಿರುವುದು "ಸೆಲೆಬ್ರೆಟಿ" ಅಂತ ಹಣೆಪಟ್ಟಿ ಕಟ್ಟಿಕೊಳ್ಳದ ಒಬ್ಬ ಸಾಧಕನ ಕಥೆ. ಈಗಾಗಲೇ 'ಅಸಾಮಾನ್ಯ' ಅಂತ ಹೇಳಿದೆ, ಸ್ಪೈಡರ್ಮ್ಯಾನ್, ಸೂಪರ್ಮ್ಯಾನ್ ಗಳ ಕಥೆಯನ್ನು ನೋಡುವಾಗ ಅಸಾಮಾನ್ಯ ಎಂದು ಅನಿಸುತ್ತದೆ, ಅಥವಾ ಇನ್ನಿತರ ಆಕ್ಷನ್ ಸಿನಿಮಾಗಳನ್ನು ನೋಡುವಾಗ ನಮಗೆ ಅವರೆಲ್ಲಾ ಅಸಾಮಾನ್ಯರು ಅಂತನ್ನಿಸುವುದು ಸತ್ಯ. ಅದೇ ರೀತಿ, ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಾ, ತನ್ನ ರೆಕ್ಕೆಗಳನ್ನು ಇನ್ನಿಲ್ಲದ ವೇಗಗಳಲ್ಲಿ ತಿರುಗಿಸುತ್ತಾ, ಭೂಮಿಯಿಂದ ಒಂದಷ್ಟು ಅಡಿ ಎತ್ತರದಲ್ಲಿ ನಿಂತಿರುವ ಹೆಲಿಕಾಪ್ಟರಿನಿಂದ ಇಳಿಯಬಿಟ್ಟ ರೋಪ್ನಲ್ಲಿ ಕೆಳಗಿಳಿಯುವುದು, ಯಾವ್ಯಾವುದೋ ಗುರುತು ಪರಿಚಯ ಇಲ್ಲದ, ಹೆಸರಿಲ್ಲದ ಪರ್ವತಗಳನ್ನು ಹತ್ತುವುದು, ಅದೂ ಕೂಡ ಬೆನ್ನ ಮೇಲೆ ಕಿಲೋ ಗಟ್ಟಲೆ ಭಾರದ ಬ್ಯಾಗ್ಗಳನ್ನು ಹೇರಿಕೊಂಡು! ಗೋಡೆಗಳ ಮೇಲೆ ಜೇಡನಂತೆ ಹತ್ತುವುದು, ಮೈ ಕೈಗಳಲ್ಲಿ ರಕ್ತ ಸುರಿದರೂ ಅಯ್ಯೋ ಅಮ್ಮಾ ಅನ್ನದೆ ಮತ್ತೆ ಎದ್ದು ನಿಲ್ಲುವುದು.... ಹೀಗೆ ಹತ್ತು ಹಲವು ಕಠಿಣ ಟಾಸ್ಕ್ಗಳೊಂದಿಗೆ ಬದುಕುವುದು ಕೂಡಾ ಸಾಮಾನ್ಯ ಸಂಗತಿಯಲ್ಲ. ಯಾವು...
Comments
Post a Comment
thank you...